ನವದೆಹಲಿ:ಜವಳಿ, ರಾಸಾಯನಿಕಗಳು, ಪ್ಯಾಕೇಜಿಂಗ್, ರಿಯಲ್ ಎಸ್ಟೇಟ್ ಮತ್ತು ಶಿಕ್ಷಣದ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿರುವ ಪ್ರಮುಖ ವ್ಯಾಪಾರ ಸಮೂಹಗಳ ಮೇಲೆ ಜುಲೈ 20 ರಂದು ದಾಳಿ ನಡೆಸಿರುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಈ ಐಟಿ ದಾಳಿ ವೇಳೆ ಸುಮಾರು ಸಾವಿರಕೋಟಿ ರೂ.ಗೂ ಅಧಿಕ ಲೆಕ್ಕ ಸಿಗದ ವಹಿವಾಟು ನಡೆದಿರುವುದು ಈ ಮಹತ್ವದ ದಾಳಿ ವೇಳೆ ತಿಳಿದು ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ನಿನ್ನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಇಲ್ಲಿಯವರೆಗೆ 24 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ನಗದು ಮತ್ತು 20 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಇತ್ಯಾದಿಗಳನ್ನು ದಾಳಿ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ. ಖೇಡಾ, ಅಹಮದಾಬಾದ್, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಒಟ್ಟು 58 ಕಡೆ ಶೋಧ ಕಾರ್ಯ ನಡೆಸಲಾಗಿದೆ ಅವರು ಮಾಹಿತಿ ನೀಡಿದ್ದಾರೆ.