ಕರ್ನಾಟಕ

karnataka

ETV Bharat / bharat

ಜ್ಯೋತಿಷಿಯ ಮಾತು ನಂಬಿದ ಯುವತಿ.. ಪ್ರಿಯಕರನಿಗೆ ವಿಷ ಹಾಕಿ ಕೊಂದ ಪ್ರಿಯತಮೆ! - ಪ್ರಿಯಕರನಿಗೆ ವಿಷ ಹಾಕಿ ಕೊಂದ ಪ್ರಿಯತಮೆ

ಜ್ಯೋತಿಷಿಯ ಭವಿಷ್ಯ ನಂಬಿ ಯುವತಿಯೊಬ್ಬಳು ತನ್ನ ಪ್ರಿಯಕನಿಗೆ ವಿಷದ ಜ್ಯೂಸ್​ ಕುಡಿಸಿ ಹತ್ಯೆ ಮಾಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ಬೆಳಕಿಗೆ ಬಂದಿದೆ.

in-kerala-girlfriend-poisoned-boyfriend-follows-the-astrologers-prediction
ಜ್ಯೋತಿಷಿಯ ಭವಿಷ್ಯ ನಂಬಿ... ಪ್ರಿಯಕನಿಗೆ ನಿತ್ಯ ವಿಷಪ್ರಾಶನ ಮಾಡಿ ಕೊಲೆಗೈದ ಪ್ರಿಯತಮೆ

By

Published : Oct 30, 2022, 10:33 PM IST

ತಿರುವನಂತಪುರಂ (ಕೇರಳ): ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದ ನರಬಲಿ ಪ್ರಕರಣದ ಬಳಿಕ ತಿರುವನಂತಪುರದ ಪರಶಾಲಾದಲ್ಲಿ ಮತ್ತೊಂದು ಆಘಾತಕಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಜ್ಯೋತಿಷಿಯೊಬ್ಬರು ಮಾತು ನಂಬಿದ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ವಿಷದ ಜ್ಯೂಸ್​ ಕುಡಿಸಿ ಹತ್ಯೆ ಮಾಡಿರುವ ಭಯಾನಕ ಪ್ರಕರಣ ಬಯಲಿಗೆ ಬಂದಿದೆ.

ಶರೋನ್​ ಎಂಬಾತನೇ ಕೊಲೆಯಾದ ಪ್ರಿಯಕರನಾಗಿದ್ದು, ಗ್ರೀಷ್ಮಾ ಎಂಬಾಕೆಯೇ ಪ್ರಿಯಕರನ ಕೊಂದಿರುವ ಆರೋಪಿ ಯುವತಿ. ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಯುವತಿಯ ಕುಟುಂಬದವರು ಸೈನಿಕರೊಬ್ಬರಿಗೆ ಮದುವೆ ಮಾಡಿಕೊಡಲು ನಿರ್ಧರಿಸಿದ್ದರು. ಆದರೆ ಆ ಪ್ರಿಯತಮೆಯಿಂದ ದೂರವಾಗಲು ಯುವಕನಿಗೆ ಇಷ್ಟವಿರಲಿಲ್ಲ.

ಈ ನಡುವೆ ನವೆಂಬರ್​ಗೂ ಮುನ್ನ ಮದುವೆ ನಡೆದರೆ ಪ್ರಿಯಕರ ಸಾಯುತ್ತಾನೆ ಎಂದು ಜ್ಯೋತಿಷಿಯು ಯುವತಿಗೆ ಹೇಳಿದ್ದರು ಎನ್ನಲಾಗ್ತಿದೆ. ಈ ವಿಷಯವನ್ನು ಯುವತಿಯು ಯುವಕನ ಗಮನಕ್ಕೆ ತಂದಿದ್ದಳು. ಆದರೂ ಸಹಿತ ಆಕೆಯನ್ನು ಬಿಡಲು ಯುವಕ ಒಪ್ಪಿರಲಿಲ್ಲವಂತೆ. ಹೀಗಾಗಿಯೇ ಜ್ಯೋತಿಷಿ ಹೇಳಿದ್ದ ಭವಿಷ್ಯ ನಂಬಿ ಮತ್ತು ಮೂಢನಂಬಿಕೆಯಿಂದಲೇ ಆಕೆ ಕೊಲೆಯ ನಿರ್ಧಾರಕ್ಕೆ ಬಂದಿದ್ದಳು. ಮನೆಯವರ ಬೆಂಬಲದಿಂದಲೇ ಈ ಕೊಲೆ ಮಾಡಿರುವುದು ಪೊಲೀಸ್​ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ತಿಂಗಳು 14ರಂದು ಶರೋನ್ ತಮಿಳುನಾಡಿನ ರಾಮವರ್ಮಂಚಿರಾದಲ್ಲಿರುವ ಯುವತಿಯ ಮನೆಗೆ ಹೋಗಿದ್ದ. ಅಲ್ಲಿ ಯುವತಿ ತಾಮ್ರದ ಸಲ್ಫೇಟ್ ಬೆರೆಸಿದ ಜ್ಯೂಸ್ ನೀಡಿದ್ದಳು. ಅಲ್ಲದೇ, ಪ್ರತಿ ಬಾರಿಯೂ ಯುವತಿ ಜೊತೆ ಹೊರಗೆ ಹೋದಾಗ ಶರೋನ್‌ಗೆ ಹೊಟ್ಟೆ ನೋವು ಬರುತ್ತಿತ್ತು ಎಂದು ಆರೋಪಿಸಿದ್ದರು.

ಹೀಗಾಗಿಯೇ ಪೊಲೀಸರು ಸುದೀರ್ಘ ಎಂಟು ಗಂಟೆಗಳ ಆರೋಪಿ ಗ್ರೀಷ್ಮಾಳನ್ನು ವಿಚಾರಣೆ ನಡೆಸಿದ್ದು, ಈ ವೇಳೆ ತನ್ನ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೇ, ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರ ನಡುವಿನ ವಾಟ್ಸ್​ಆ್ಯಪ್​ ಚಾಟ್‌ಗಳು ಕೂಡ ಬೆಳಕಿಗೆ ಬಂದಿದ್ದು, ಜ್ಯೂಸ್ ಚಾಲೆಂಜ್ ಹೆಸರಿನಲ್ಲಿ ಶರೋನ್​ಗೆ ಗ್ರೀಷ್ಮಾ ಜ್ಯೂಸ್ ಕುಡಿಸುತ್ತಿದ್ದಳು ಎಂದು ಗೊತ್ತಾಗಿದೆ. ಆದ್ದರಿಂದಲೇ ನಿತ್ಯ ವಿಷಪ್ರಾಶನ ಮಾಡಿ ಕೊಲೆಗೈದಿರುವುದು ದೃಢಪಟ್ಟಿದೆ.

ಇದನ್ನೂ ಓದಿ:ಕದ್ದು ಮುಚ್ಚಿ ನಡೆಯುತ್ತಿತ್ತು ಕಚಗುಳಿ.. 24 ವರ್ಷದ ಬಳಿಕ ಸಹೋದರನಿಗೆ ಪತ್ನಿ ತ್ಯಾಗ ಮಾಡಿದ ಪತಿ!

ABOUT THE AUTHOR

...view details