ಚೆನ್ನೈ(ತಮಿಳುನಾಡು):ಮಹಿಳೆಯೋರ್ವಳು ತಾನು ತಮಿಳುನಾಡಿನ ಮಾಜಿ ಸಿಎಂ, ಅಲ್ಲಿನ ಜನತೆಯ ಪಾಲಿನ 'ಅಮ್ಮ', ದಿವಂಗತ ಜಯಲಲಿತಾ ಪುತ್ರಿಯೆಂದು ಹೇಳಿಕೊಂಡಿದ್ದು ಸಾಕಷ್ಟು ಚರ್ಚೆಗಳಿಗೆ ಮತ್ತು ವಿವಾದಗಳಿಗೆ ಕಾರಣವಾಗಿದೆ.
ಚೆನ್ನೈ ಪಲ್ಲವರಂ ನಿವಾಸಿಯಾದ ಪ್ರೇಮಾ ಎಂಬಾಕೆ ತಾನು ಜಯಲಲಿತಾ ಪುತ್ರಿಯೆಂದು ಹೇಳಿಕೊಂಡಿದ್ದಾಳೆ. ಚೆನ್ನೈನ ಮೆರೀನಾ ಬೀಚ್ ಬಳಿಯಿರುವ ಜಯಲಲಿತಾ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು, ನಂತರ ಮಾಧ್ಯಮಗಳಿಗೆ ತಾನು ಜಯಲಲಿತಾ ಪುತ್ರಿ ಎಂದು ಹೇಳಿಕೊಂಡಿದ್ದಾಳೆ.
ನಾನು ಹುಟ್ಟಿದ್ದು ಮೈಸೂರಿನಲ್ಲಿ. ಸುಮಾರು 30 ವರ್ಷಗಳಿಂದ ಚೆನ್ನೈನಲ್ಲಿ ವಾಸವಿದ್ದೇನೆ. ಸಮಯ ಬಂದಾಗ ನಾನು ಜಯಲಲಿತಾ ಪುತ್ರಿಯೆಂದು ಸಾಕ್ಷಿ ಸಮೇತ ಸಾಬೀತುಪಡಿಸುತ್ತೇನೆ ಎಂದು ಈ ವೇಳೆ ಪ್ರೇಮಾ ಹೇಳಿದ್ದಾರೆ.