ಚೆನ್ನೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಭಾರತ ಮತ್ತು ಏಷ್ಯಾದ ಮೆಮೊರಿ ಅಧ್ಯಯನ ಕ್ಷೇತ್ರದಲ್ಲಿ ಮೊದಲ ರಾಷ್ಟ್ರೀಯ ಜಾಲವಾದ 'ಇಂಡಿಯನ್ ನೆಟ್ವರ್ಕ್ ಫಾರ್ ಮೆಮೊರಿ ಸ್ಟಡೀಸ್' (ಐಎನ್ಎಂಎಸ್) ಅನ್ನು ಪ್ರಾರಂಭಿಸಿದೆ. ಇಂಟರ್ನ್ಯಾಷನಲ್ ಮೆಮೊರಿ ಸ್ಟಡೀಸ್ ಅಸೋಸಿಯೇಷನ್ (ಎಂಎಸ್ಎ) ಆಮ್ಸ್ಟರ್ಡ್ಯಾಮ್ ಆಶ್ರಯದಲ್ಲಿ ಇದು ರೂಪುಗೊಂಡಿದೆ.
ಐಐಟಿ ಮದ್ರಾಸ್ನಿಂದ 'ಇಂಡಿಯನ್ ನೆಟ್ವರ್ಕ್ ಫಾರ್ ಮೆಮೊರಿ ಸ್ಟಡೀಸ್' ಪ್ರಾರಂಭ - international memory studies association
ಇಂಟರ್ನ್ಯಾಷನಲ್ ಮೆಮೊರಿ ಸ್ಟಡೀಸ್ ಅಸೋಸಿಯೇಷನ್ (ಎಂಎಸ್ಎ) ಆಮ್ಸ್ಟರ್ಡ್ಯಾಮ್ ಆಶ್ರಯದಲ್ಲಿ 'ಇಂಡಿಯನ್ ನೆಟ್ವರ್ಕ್ ಫಾರ್ ಮೆಮೊರಿ ಸ್ಟಡೀಸ್' (ಐಎನ್ಎಂಎಸ್) ರೂಪುಗೊಂಡಿದೆ. ಇನ್ನು ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ, ಇರಾಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಮಾರಿಷಸ್, ಸ್ವೀಡನ್, ಯು.ಕೆ, ಮತ್ತು ಅಮೆರಿಕದಿಂದ ಸುಮಾರು 600 ಮಂದಿ ಸಂಶೋಧಕರು ಭಾಗಿಯಾಗಿದ್ದರು.
ಐಎನ್ಎಂಎಸ್ ಸಾಂಸ್ಕೃತಿಕ ಅಧ್ಯಯನ ಕೇಂದ್ರಗಳು, ನರವಿಜ್ಞಾನ ಪ್ರಯೋಗಾಲಯಗಳು, ಎಐ ಮತ್ತು ಸಂಬಂಧಿತ ಕ್ಷೇತ್ರಗಳ ಉದ್ಯಮ ಸಂಶೋಧನೆ ಸೇರಿದಂತೆ ವಿವಿಧ ಸಂಸ್ಥೆಗಳಿಂದ ‘ಮೆಮೊರಿ’ ಯೊಂದಿಗೆ ಸಂಕೀರ್ಣವಾಗಿ ತೊಡಗಿಸಿಕೊಳ್ಳುವಿಕೆಗಳನ್ನು ಸಂಯೋಜಿಸುತ್ತದೆ. ಇನ್ನು ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ, ಇರಾಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಮಾರಿಷಸ್, ಸ್ವೀಡನ್, ಯು.ಕೆ, ಮತ್ತು ಅಮೆರಿಕದಿಂದ ಸುಮಾರು 600 ಮಂದಿ ಸಂಶೋಧಕರು ಭಾಗಿಯಾಗಿದ್ದರು.
ಇಂಡಿಯನ್ ನೆಟ್ವರ್ಕ್ ಫಾರ್ ಮೆಮೊರಿ ಸ್ಟಡೀಸ್ ಅನ್ನು ಡಾ. ಅವಿಶೇಕ್ ಪರುಯಿ ಮತ್ತು ಐಐಟಿ ಮದ್ರಾಸ್ನ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರು (ಇಂಗ್ಲಿಷ್) ಡಾ.ಮೆರಿನ್ ಸಿಮಿ ರಾಜ್ ಅವರು ಸ್ಥಾಪಿಸಿದ್ದಾರೆ. ಡಾ. ಪರುಯಿ ಅವರು ಅಂತಾರಾಷ್ಟ್ರೀಯ ಮೆಮೊರಿ ಅಧ್ಯಯನ ಸಂಘದ ಸಲಹಾ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಇಂಡಿಯನ್ ನೆಟ್ವರ್ಕ್ ಫಾರ್ ಮೆಮೊರಿ ಸ್ಟಡೀಸ್, ಐಐಟಿ ಮದ್ರಾಸ್ನ ಸೆಂಟರ್ ಫಾರ್ ಮೆಮರಿ ಸ್ಟಡೀಸ್ನಿಂದ ಹೊರಹೊಮ್ಮಿದೆ. ಇದಕ್ಕೆ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಧನಸಹಾಯ ಮಾಡಿದೆ.