ಬೆಂಗಳೂರು:ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯ (ಇಗ್ನೋ- IGNOU) ದಲ್ಲಿ ಖಾಲಿ ಇರುವ 102 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಜ್ಯೂನಿಯರ್ ಅಸಿಸ್ಟಂಟ್, ಟೈಪಿಸ್ಟ್ ಮತ್ತು ಸ್ಟೆನೋಗ್ರಾಫರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತದಾದ್ಯಂತ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಖಾಲಿ ಇರುವ 102 ಹುದ್ದೆಗಳು ಹೀಗಿವೆ.
- ಜ್ಯೂನಿಯರ್ ಅಸಿಸ್ಟಂಟ್ ಮತ್ತು ಟೈಪಿಸ್ಟ್ - 50
- ಸ್ಟೆನೋಗ್ರಾಫರ್ -52
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ , ಪದವಿಯನ್ನು ಪೂರ್ಣಗೊಳಿಸಿರಬೆಕು.
ವಯೋಮಿತಿ: ಜ್ಯೂನಿಯರ್ ಅಸಿಸ್ಟಂಟ್ ಮತ್ತು ಟೈಪಿಸ್ಟ್ ಹುದ್ದೆಗೆ ಕನಿಷ್ಟ 18 ವರ್ಷ ಆಗಿದ್ದು, ಗರಿಷ್ಟ ವಯೋಮಿತಿ 27 ವರ್ಷ ಆಗಿದೆ. ಸ್ಟೆನೋಗ್ರಾಫರ್ ಹುದ್ದೆಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಆಗಿರಬೇಕು.
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.