ಕರ್ನಾಟಕ

karnataka

ETV Bharat / bharat

ಸೇನಾ ಹೆಲಿಕಾಪ್ಟರ್ ಪತನ ಪ್ರಕರಣ: ಮುಂದಿನ ವಾರ ತನಿಖಾ ವರದಿ ಸಲ್ಲಿಕೆ ಸಾಧ್ಯತೆ - ಸೇನಾ ಹೆಲಿಕಾಪ್ಟರ್ ಪತನ ಪ್ರಕರಣ

IAF chopper crash Probe report: ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ಪತನದ ತನಿಖೆ ಈಗಾಗಲೇ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಮುಂದಿನ ವಾರ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.

IAF chopper crash
IAF chopper crash

By

Published : Jan 1, 2022, 7:06 PM IST

ನವದೆಹಲಿ:ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​, ಅವರ ಪತ್ನಿ ಸೇರಿದಂತೆ 13 ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಯುಪಡೆ ಎಂಐ-17ವಿ5 ಹೆಲಿಕಾಪ್ಟರ್​ ಪತನದ ತನಿಖಾ ವರದಿ ಮುಂದಿನ ವಾರ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಸೇನಾ ಹೆಲಿಕಾಪ್ಟರ್ ಪತನದ ಸಮಗ್ರ ತನಿಖೆಗೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು, ಏರ್ ಮಾರ್ಷಲ್​ ಮನ್ವಿಂದರ್​ ಸಿಂಗ್ ನೇತೃತ್ವದ ತನಿಖಾ ತಂಡ ತನಿಖೆ ನಡೆಸುತ್ತಿದೆ. ಡಿಸೆಂಬರ್​ 9ರಂದು ಬ್ಲಾಕ್ ಬಾಕ್ಸ್​ ವಶಕ್ಕೆ ಪಡೆದುಕೊಂಡು ಅನೇಕ ಆಮಾಯಗಳಿಂದ ತನಿಖೆ ಕೈಗೊಂಡಿದೆ. ಅಪಘಾತದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಇದೀಗ ವರದಿ ಮುಂದಿನ ವಾರ ವಾಯುಪಡೆ ಹೆಡ್​​ ಕ್ವಾರ್ಟರ್ಸ್​ಗೆ ಸಲ್ಲಿಕೆಯಾಗಲಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಮಾರ್ಷಲ್​ ಮಾನವೇಂದ್ರ ಸಿಂಗ್​ ನೇತೃತ್ವ ತಂಡ ಎಲ್ಲ ರೀತಿಯ ಸಂಭವನೀಯ ಸನ್ನಿವೇಶಗಳಿಂದ ತನಿಖೆ ನಡೆಸಿದ್ದಾರೆ. ಎಲ್ಲ ಬೆಳವಣಿಗೆ ಬಗ್ಗ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿರಿ:ಸೇನಾ ಹೆಲಿಕಾಪ್ಟರ್​ ಪತನ: ತನಿಖೆ ನೇತೃತ್ವ ವಹಿಸಿಕೊಂಡ ಏರ್​​​ ಮಾರ್ಷಲ್​​ ಮನ್ವಿಂದರ್​​ ಸಿಂಗ್​ ಬಗ್ಗೆ ನಿಮಗೆಷ್ಟು ಗೊತ್ತು!?

ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಪತನಗೊಂಡಿರುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ತಿಳಿದು ಬಂದಿದ್ದು, ವಿವಿಧ ಸಂಭಾವ್ಯ ಕೋನಗಳಿಂದ ತನಿಖೆ ನಡೆದಿದೆ. ವಾಯುಪಡೆ ಮುಖ್ಯಸ್ಥ ಏರ್​ ಚೀಫ್​ ಮಾರ್ಷಲ್​ ವಿ ಆರ್​ ಚೌಧರಿ ಅವರಿಗೆ ಈ ವರದಿ ಸಲ್ಲಿಕೆಯಾಗಲಿದೆ.

ಮನ್ವಿಂದರ್​​​ ಸಿಂಗ್​ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್​ನ ಕಮಾಂಡಿಂಗ್​​ ಆಫೀಸರ್​​​​ ಆಗಿದ್ದು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವೆಂದರೆ ಇವರು ಖುದ್ದಾಗಿ ಹೆಲಿಕಾಪ್ಟರ್​ ಪೈಲೆಟ್​​​ ಆಗಿರುವ ಅನುಭವ ಹೊಂದಿದ್ದಾರೆ.

ಡಿಸೆಂಬರ್​​ 8ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲ್ಲಿಂಗ್ಟನ್​​ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದ ವೇಳೆ ಕೂನೂರು ಬಳಿ ಹೆಲಿಕಾಪ್ಟರ್ ಪತನವಾಗಿತ್ತು. ಈ ವೇಳೆ ಹೆಲಿಕಾಪ್ಟರ್​ನಲ್ಲಿದ ಬಿಪಿನ್​ ರಾವತ್​ ಅವರ ಪತ್ನಿ ಮಧುಲಿಕಾ ಸೇರಿದಂತೆ ಸೇನಾ ಸಿಬ್ಬಂದಿ ವಿಧಿವಶರಾಗಿದ್ದರು. ಗ್ರೂಪ್ ಕ್ಯಾಪ್ಟನ್​​ ವರುಣ್​ ಸಿಂಗ್​ ಚಿಕಿತ್ಸೆ ಫಲಕಾರಿಯಾಗದೇ ವಾರದ ನಂತರ ಬೆಂಗಳೂರಿನಲ್ಲಿ ನಿಧನರಾಗಿದ್ದರು.

ABOUT THE AUTHOR

...view details