ಕರ್ನಾಟಕ

karnataka

ETV Bharat / bharat

ಕೊಳಚೆ ನೀರಿನೊಂದಿಗೆ ಮನೆಗೆ ಬಂದ ಹಾವು: ಅದನ್ನು ಹಿಡಿದು ಮಹಾನಗರ ಪಾಲಿಕೆ ಕಚೇರಿಗೆ ಬಿಟ್ಟು ಬಂದ ನಿವಾಸಿ!

ಕೊಳಚೆ ನೀರಿನೊಂದಿಗೆ ಮನೆಗೆ ಬಂದ ಹಾವನ್ನು ಹಿಡಿದು ನಿವಾಸಿಯೊಬ್ಬರು ಜಿಎಚ್​ಎಂಸಿ ಕಚೇರಿಯಲ್ಲಿ ಬಿಟ್ಟುಬಂದ ಘಟನೆ ಸಿಕಂದರಾಬಾದ್​ನಲ್ಲಿ ನಡೆದಿದೆ.

ಮನೆಗೆ ಬಂದ ಹಾವನ್ನು ಹಿಡಿದು ಜಿಎಚ್‌ಎಂಸಿ ಕಚೇರಿಯಲ್ಲಿ ಬಿಟ್ಟ ಹೈದರಾಬಾದ್​ ನಿವಾಸಿ
ಮನೆಗೆ ಬಂದ ಹಾವನ್ನು ಹಿಡಿದು ಜಿಎಚ್‌ಎಂಸಿ ಕಚೇರಿಯಲ್ಲಿ ಬಿಟ್ಟ ಹೈದರಾಬಾದ್​ ನಿವಾಸಿ

By

Published : Jul 26, 2023, 7:43 PM IST

Updated : Jul 26, 2023, 8:36 PM IST

ಕೊಳಚೆ ನೀರಿನೊಂದಿಗೆ ಮನೆಗೆ ಬಂದ ಹಾವು

ಹೈದರಾಬಾದ್​: ಕಳೆದೊಂದು ವಾರದಿಂದ ಹೈದರಾಬಾದ್ ನಗರದಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಈ ಮಳೆಯಿಂದಾಗಿ ರಸ್ತೆಗಳು, ಕಾಲೋನಿಗಳು ಮುಳುಗಡೆಯಾಗುತ್ತಿವೆ. ಕೆಲವೆಡೆ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಕೊಳಚೆ ನೀರಿನ ಜತೆಗೆ ಕ್ರಿಮಿ, ಹಾವುಗಳೂ ಮನೆಗಳಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಸಿಕಂದರಾಬಾದ್‌ನ ಅಲ್ವಾಲ್ ಪ್ರದೇಶದಲ್ಲಿ ಸಂಪತ್ ಎಂಬ ವ್ಯಕ್ತಿಯ ಮನೆಗೆ ಕೊಳಚೆ ನೀರಿನೊಂದಿಗೆ ಹಾವು ಬಂದಿದ್ದರಿಂದ ಕುಟುಂಬದ ಸದಸ್ಯರು ಭಯಭೀತರಾಗಿದ್ದರು.

ಅಧಿಕಾರಿಯೊಬ್ಬರ ಮೇಜಿನ ಮೇಲೆ ಹಾವನ್ನು ಬಿಟ್ಟ ನಿವಾಸಿ: ಹಾವು ಮನೆಗೆ ಬಂದದ್ದನ್ನು ಕಂಡ ಸಂಪತ್ ಅವರು ಜಿಹೆಚ್‌ಎಂಸಿ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆರು ಗಂಟೆ ಕಳೆದರೂ ಅಧಿಕಾರಿಗಳು ಬಾರದೇ ಇದ್ದಾಗ ಆಕ್ರೋಶ ವ್ಯಕ್ತಪಡಿಸಿದ ಸಂಪತ್ ಹಾವನ್ನು ಪೆಟ್ಟಿಗೆಯಲ್ಲಿ ಹಾಕಿದ್ದಾರೆ. ಆ ಬಳಿಕ ತಾಳ್ಮೆ ಕಳೆದುಕೊಂಡು ನೇರವಾಗಿ ಜಿಎಚ್‌ಎಂಸಿ ವಾರ್ಡ್‌ ಕಚೇರಿಗೆ ತೆರಳಿದ್ದಾರೆ. ಅಲ್ಲಿ ಅಧಿಕಾರಿಯೊಬ್ಬರ ಮೇಜಿನ ಮೇಲೆ ಹಾವನ್ನು ಬಿಟ್ಟು ಅವರ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.

ಮಳೆಯಿಂದ ನಗರದಲ್ಲಿ ಸಮಸ್ಯೆಗಳು ಹೆಚ್ಚಳ:ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಜಿಎಚ್‌ಎಂಸಿ ವಿರುದ್ಧ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದ ನಗರದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು, ಸಹಾಯಕ್ಕಾಗಿ ನಗರದ ನಿವಾಸಿಗಳು 9000113667 ನಂಬರ್​ ಅನ್ನು ಸಂಪರ್ಕಿಸುವಂತೆ ಜಿಎಚ್‌ಎಂಸಿ ಮನವಿ ಮಾಡಿದೆ. ಈ ಘಟನೆಯಿಂದ ಈ ಜಿಹೆಚ್​ಎಂಸಿ ಕಾಲ್ ಸೆಂಟರ್​ನ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತಿದೆ. ಮತ್ತೊಂದೆಡೆ, ಈ ಬಗ್ಗೆ ಯಾವುದೇ ಜಿಎಚ್‌ಎಂಸಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ವಿಷಪೂರಿತ ಹಾವನ್ನು ಪೆಟ್ಟಿಗೆಯಲ್ಲಿ ಹಾಕಿ ಆಸ್ಪತ್ರೆಗೆ ಆಗಮಿಸಿದ ಅಜ್ಜ: ಇನ್ನೊಂದೆಡೆ ಇಲ್ಲಿನ ಸುಪೌಲ್ ಎಂಬಲ್ಲಿ 2 ವರ್ಷದ ಬಾಲಕನಿಗೆ ವಿಷಪೂರಿತ ಹಾವೊಂದು (ಜುಲೈ 20-2023) ಕಚ್ಚಿದ್ದು, ಮಗುವಿನ ಅಜ್ಜ ಧೈರ್ಯ ತೋರಿ ಕೂಡಲೇ ಹಾವು ಹಿಡಿದಿದ್ದರು. ಬಳಿಕ, ಮೊಮ್ಮಗನ ಸಮೇತ ಹಾವಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು. ವೈದ್ಯರು ಅಚ್ಚರಿಗೊಂಡು ತಕ್ಷಣವೇ ಮಗುವಿಗೆ ಚಿಕಿತ್ಸೆ ನೀಡಿದ್ದ ಘಟನೆ ಜಿಲ್ಲೆಯ ತ್ರಿವೇಣಿಗಂಜ್ ಪ್ರದೇಶದಲ್ಲಿ ನಡೆದಿತ್ತು.

ಕಠೋಲ್ವಾ ವಾರ್ಡ್ ನಿವಾಸಿ ಶಾಂತಿದೇವಿ ಎಂಬವರ 2 ವರ್ಷದ ಮೊಮ್ಮಗ ಉತ್ತಮ್​ ಬಾಗಿಲಲ್ಲಿ ಆಟವಾಡುತ್ತಿದ್ದ. ಅಷ್ಟರಲ್ಲಿ ವಿಷಕಾರಿ ಹಾವು ಕಚ್ಚಿತ್ತು. ಈ ಸಮಯದಲ್ಲಿ ಮಗು ಜೋರಾಗಿ ಅಳಲು ಆರಂಭಿಸಿದ್ದು, ಮೊಮ್ಮಗ ಅಳುತ್ತಿರುವುದನ್ನು ನೋಡಿದ ಅಜ್ಜ ಅಲ್ಲಿಗೆ ಬಂದಾಗ ಹಾವು ಹರಿದು ಹೋಗುತ್ತಿರುವುದನ್ನು ಗಮನಿಸಿದ್ದರು. ಮಗುವಿನ ಕಾಲಿನಲ್ಲಿ ಹಾವು ಕಚ್ಚಿದ ಗುರುತು ಕಾಣಿಸಿರುವುದನ್ನು ನೋಡಿ, ಧೈರ್ಯ ತೋರಿ ಹಾವನ್ನು ಹಿಡಿದು ಪೆಟ್ಟಿಗೆಯಲ್ಲಿಟ್ಟುಕೊಂಡು ತ್ರಿವೇಣಿಗಂಜ್ ಆಸ್ಪತ್ರೆಗೆ ತೆರಳಿದ್ದರು.

ಈ ಕುರಿತು ಮಾಹಿತಿ ನೀಡಿರುವ ತ್ರಿವೇಣಿಗಂಜ್ ಉಪವಿಭಾಗೀಯ ಆಸ್ಪತ್ರೆಯ ವೈದ್ಯ ಡಾ. ಉಮೇಶ್ ಕುಮಾರ್, ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ. ಒಂದೂವರೆ ಗಂಟೆ ಕಳೆದರೂ ಹಾವು ಕಚ್ಚಿದ ಯಾವುದೇ ಸ್ಪಷ್ಟ ಲಕ್ಷಣಗಳು ಕಂಡು ಬಂದಿಲ್ಲ. ಹೆಚ್ಚಿನ ನಿಗಾ ವಹಿಸಲಾಗಿದೆ ಎಂದಿದ್ದರು. ಇನ್ನೊಂದೆಡೆ ತಾತನ ಸಾಹಸದ ವಿಷಯ ತಿಳಿಯುತ್ತಿದ್ದಂತೆ ತ್ರಿವೇಣಿಗಂಜ್ ಪ್ರದೇಶದಲ್ಲಿ ಧೈರ್ಯಶಾಲಿ ಅಜ್ಜನ ಬಗ್ಗೆ ಮತ್ತು ಮೊಮ್ಮಗನ ಮೇಲಿನ ಪ್ರೀತಿಯ ಕುರಿತು ಭಾರಿ ಚರ್ಚೆಯಾಗಿತ್ತು.

ಇದನ್ನೂ ಓದಿ:ಮೊಮ್ಮಗನಿಗೆ ಕಚ್ಚಿದ ವಿಷಪೂರಿತ ಹಾವನ್ನು ಪೆಟ್ಟಿಗೆಯಲ್ಲಿ ಹಾಕಿ ಆಸ್ಪತ್ರೆಗೆ ಆಗಮಿಸಿದ ಅಜ್ಜ!- ವಿಡಿಯೋ

Last Updated : Jul 26, 2023, 8:36 PM IST

ABOUT THE AUTHOR

...view details