ಹೈದರಾಬಾದ್ (ತೆಲಂಗಾಣ): ಪ್ರತಿ ವರ್ಷ ಗಣೇಶನ ಹಬ್ಬ ಬಂದ್ರೆ ಸಾಕು ತೆಲುಗು ರಾಜ್ಯಗಳಾದ ತೆಲಂಗಾಣ - ಆಂಧ್ರಪ್ರದೇಶದ ಜನರ ಗಮನ ಖೈರತಾಬಾದ್ ಮತ್ತು ಬಾಲಾಪುರ್ ಮೇಲೆ ಇರುತ್ತದೆ. ವಿಶ್ವದ ಅತಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡೋದ್ರಲ್ಲಿ ಖೈರತಾಬಾದ್ ಪ್ರಸಿದ್ಧಿ ಪಡೆದರೆ, ಗಣೇಶನ ಮುಂದಿಟ್ಟ ಲಡ್ಡು ಹರಾಜಲ್ಲಿ ಬಾಲಾಪುರ್ ಗಣೇಶ ಖ್ಯಾತಿ ಪಡೆದಿದೆ.
ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಬಾಲಾಪುರ್ನಲ್ಲಿ ಈ ವರ್ಷದ ಗಣೇಶನ ಲಡ್ಡು ಬರೋಬ್ಬರಿ 18.90 ಲಕ್ಷ ರೂಪಾಯಿಗೆ ಹರಾಜಾಗಿದೆ. 1,116 ರೂ.ನಿಂದ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಸುಮಾರು 19 ಜನರು ಭಾಗವಹಿಸಿದ್ದರು. ಆಂಧ್ರಪ್ರದೇಶದ ಎಂಎಲ್‌ಸಿ ರಮೇಶ್ ಯಾದವ್ ಮತ್ತು ಮರಿ ಶಶಾಂಕ್ ರೆಡ್ಡಿ ಎಂಬುವರು 18.90 ಲಕ್ಷ ರೂ. ನೀಡಿ ಹರಾಜಲ್ಲಿ ಲಡ್ಡು ಪಡೆದಿದ್ದಾರೆ.