ಕರ್ನಾಟಕ

karnataka

ETV Bharat / bharat

ಮದುವೆಯಾಗಿ ನಾಲ್ಕೇ ತಿಂಗಳಿಗೆ ಬಿತ್ತು 2ನೇ ಹೆಂಡ್ತಿಯ ಹೆಣ... ಕೇವಲ 3 ಸಾವಿರ ರೂ.ಗಾಗಿ ಕೊಂದ 2ನೇ ಗಂಡ!

ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ಹೆಂಡ್ತಿಯನ್ನು ಕೇವಲ ಮೂರು ಸಾವಿರ ರೂ.ಗಾಗಿ ಗಂಡ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

Husband killed his wife, Husband killed his wife for money issue, Husband killed his wife for money issue in Hyderabad, Hyderabad news, Hyderabad cirme news, ಹೆಂಡ್ತಿಯನ್ನು ಕೊಂದ ಗಂಡ, ಹಣ ವಿವಾದ ಹಿನ್ನೆಲೆ ಹೆಂಡ್ತಿಯನ್ನು ಕೊಂದ ಗಂಡ, ಹೈದರಾಬಾದ್​ನಲ್ಲಿ ಹಣ ವಿವಾದ ಹಿನ್ನೆಲೆ ಹೆಂಡ್ತಿಯನ್ನು ಕೊಂದ ಗಂಡ, ಹೈದರಾಬಾದ್​ ಸುದ್ದಿ, ಹೈದರಾಬಾದ್​ ಅಪರಾಧ ಸುದ್ದಿ,
ಕೇವಲ 3 ಸಾವಿರಕ್ಕಾಗಿ ಕೊಂದ 2ನೇ ಗಂಡ

By

Published : May 6, 2021, 12:15 PM IST

ವಿಜಯವಾಡ: ಗಂಡನೊಬ್ಬ ತನ್ನ ಹೆಂಡ್ತಿಯನ್ನು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅಜಿತ್​ಸಿಂಗ್​ ನಗರದಲ್ಲಿ ನಡೆದಿದೆ.

ಏನಿದು ಘಟನೆ...

ವಡ್ಡಾದಿ ದುರ್ಗಾರಾವ್ ಮತ್ತು ನೀರಜಾ ಎಂಬುವರಿಗೆ ನಾಲ್ಕು ತಿಂಗಳ ಹಿಂದೆ ಮದುವೆಯಾಗಿತ್ತು. ನೀರಜಾಳ ಮೊದಲನೇ ಗಂಡ ಅಕಾಲಿಕ ಮರಣ ಹೊಂದಿದ್ದು, ದುರ್ಗಾರಾವ್​ ಮೊದಲನೇ ಹೆಂಡ್ತಿಯಿಂದ ವಿಚ್ಛೇದನ ಪಡೆದಿದ್ದರಿಂದ ಇಬ್ಬರು ಎರಡನೇ ಮದುವೆ ಮಾಡಿಕೊಂಡಿದ್ದಾರೆ.

ದುರ್ಗಾರಾವ್​ ಶಾಪ್​ವೊಂದರಲ್ಲಿ ಹೆಲ್ಪರ್​ ಆಗಿ ಕೆಲಸ ಮಾಡುತ್ತಿದ್ದ. ಮದುವೆಯಾದ ಬಳಿಕ ಎರಡು ತಿಂಗಳು ಇಬ್ಬರು ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು. ಬಳಿಕ ಇಬ್ಬರ ಮಧ್ಯೆ ಮನಸ್ತಾಪಗಳು ಬಂದಿವೆ. ಹೀಗಾಗಿ ಮದುವೆಯಾದ ಎರಡೇ ತಿಂಗಳಿಗೆ ನೀರಜಾ ಗಂಡನಿಂದ ದೂರವಾಗಿ ವಾಂಬೇ ಕಾಲೋನಿಯಲ್ಲಿ ವಾಸಿಸುತ್ತಿದ್ದಳು.

ಇಬ್ಬರು ಒಟ್ಟಾಗಿ ಜೀವನ ಮಾಡುತ್ತಿದ್ದ ಸಂದರ್ಭದಲ್ಲಿ ನೀರಜಾ ತನ್ನ ಗಂಡನಿಗೆ 3 ಸಾವಿರ ರೂಪಾಯಿ ಕೊಟ್ಟಿದ್ದಳು. ಇದನ್ನು ವಾಪಸ್​ ನೀಡುವಂತೆ ದುರ್ಗಾರಾವ್​ಗೆ ಕಾಡುತ್ತಿದ್ದಳು. ಹಣ ಕೇಳುವ ಸಂಬಂಧ ನೀರಜಾ ದುರ್ಗಾರಾವ್​ ಮನೆಗೆ ತೆರಳಿ, ನನಗೆ ಹಣದ ಅವಶ್ಯಕತೆಯಿದೆ. ನನಗೆ ಹಣ ಬೇಕೆಂದು ಗಲಾಟೆ ಮಾಡಿದ್ದಾಳೆ. ಈ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಮನೆಯಲ್ಲಿದ್ದ ಚಾಕುವಿನಿಂದ ಮನಸೋಇಚ್ಛೆ ನೀರಜಾ ಮೇಲೆ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನೀರಜಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನೀರಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ನೀರಜಾ ಸಹೋದರ ದೂರು ದಾಖಲಿಸಿದ್ದಾನೆ.

ಈ ಘಟನೆ ಕುರಿತು ಅಜಿತ್​ಸಿಂಗ್​ ನಗರ​ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details