ಕರ್ನಾಟಕ

karnataka

ETV Bharat / bharat

ಹೋಳಿ ಪಾರ್ಟಿ ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು..! ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ! - kannada top news

ವರ್ಣರಂಜಿತ ಸಂಭ್ರಮ ಅಥವಾ ಹೋಳಿ ಪಾರ್ಟಿಯನ್ನು ಆಯೋಜಿಸಲು ಹೊಂದಿರಬೇಕಾದ ಅಗತ್ಯತೆಗಳ ಪಟ್ಟಿ ಇಲ್ಲಿದೆ!

Holi 2023: 6 essential items you need to host ultimate Holi party!
ಹೋಳಿ ಪಾರ್ಟಿಯನ್ನು ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು!

By

Published : Mar 8, 2023, 8:36 PM IST

ಹೈದರಾಬಾದ್: ಹೋಳಿ ಹಬ್ಬವು ಸಂತೋಷದ ಮತ್ತು ಸಂಭ್ರಮದ ಹಬ್ಬವಾಗಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಒಬ್ಬರಿಗೊಬ್ಬರು ಬಣ್ಣ ಎರಚುವ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಆದೇ ರೀತಿ ಹೋಳಿ ಪಾರ್ಟಿ ಆಯೋಜಿಸುವುದಕ್ಕೆ ಬೇಕಾದ ಆರು ಅಗತ್ಯತೆಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.

ಹೋಳಿ ಪಾರ್ಟಿಯನ್ನು ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು!

ಆಕರ್ಷಕ ಉಡುಗೆ ತೊಡುಗೆ:ಹೋಳಿ ಎಂದರೆ ಬಣ್ಣಗಳ ಹಬ್ಬ, ಆದ್ದರಿಂದ ನಿಮ್ಮ ಉಡುಗೆ ತುಂಬಾ ಸೂಕ್ತವಾಗಿರಬೇಕು, ನೀವು ಹೋಳಿ ಪಾರ್ಟಿಯನ್ನು ಆಯೋಜಿಸುತ್ತಿದ್ದರೆ, ನಿಮ್ಮ ಅತಿಥಿಗಳಿಗೆ ಬಿಳಿ ಬಣ್ಣದ ಉಡುಗೆಯನ್ನು ತೊಡಲು ಹೇಳಿ ವಿಶೇಷವಾಗಿ ಕುರ್ತಾ ಹಾಗೂ ಸೀರೆ, ಏಕೆಂದರೆ ಬಿಳಿ ಬಟ್ಟೆಯ ಮೇಲೆ ಬಣ್ಣಗಳು ಬಿಳುವುದರಿಂದ ಬಹಳ ಕಲರ್​ಫುಲ್​ ಆಗಿ ಕಾಣಿಸುತ್ತದೆ ಮತ್ತು ಉತ್ಸಾಹಭರಿತ ನೃತ್ಯಗಳಿಂದ ಹಿಡಿದು ಬಣ್ಣದ ಚೆಲ್ಲಾಟದವರೆಗೆ ಹಬ್ಬದ ಪ್ರತಿ ಕ್ಷಣವನ್ನು ನೀವು ಆನಂದಿಸಿರಬಹುದು.

ಹೋಳಿ ಪಾರ್ಟಿಯನ್ನು ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು!

ನೈಸರ್ಗಿಕ ಬಣ್ಣಗಳನ್ನು ಬಳಸಿ: ಹೋಳಿ ಆಡುವಾಗ ರಾಸಾಯನಿಕದಿಂದ ತಯಾರಿಸಿದ ಬಣ್ಣಗಳನ್ನು ಬಳಸಬೇಡಿ. ಅದು ನಿಮ್ಮ ದೇಹದ ಚರ್ಮದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಆದ್ದರಿಂದ ಬಣ್ಣಗಳೊಂದಿಗೆ ಆಟವಾಡುವಾಗ, ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿ. ಹೂವುಗಳು, ಹಣ್ಣುಗಳು ಮತ್ತು ತರಕಾರಿಗಳಿಂದ ಮಾಡಿದ ನೈಸರ್ಗಿಕ ಬಣ್ಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹೋಳಿ ಪಾರ್ಟಿಯನ್ನು ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು!

ತ್ವಚೆಯ ಬಗ್ಗೆ ಕಾಳಜಿ ವಹಿಸಿ:ಸಾಮಾನ್ಯವಾಗಿ ಹೋಳಿ ಆಡುವಾಗ ಹಿರಿಯರು ಕಿರಿಯರೆನ್ನದೇ ಎಲ್ಲರೂ ಉತ್ಸುಕರಾಗಿರುತ್ತಾರೆ. ಆ ಸಂಭ್ರಮದ ನಡುವೆಯೂ ನೀವು ನಿಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ರಾಸಾಯನಿಕ ಬಳಸಿ ಮಾಡಲ್ಪಟ್ಟ ಬಣ್ಣಗಳಿಂದ ಚರ್ಮದ ತುರಿಕೆ, ಓಣ ತ್ವಚೆ, ಕೂದಲು ಉದುರುವುದು ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಮಾಡಿದ ಬಣ್ಣಗಳನ್ನು ಬಳಸಿ ಹೋಳಿಯನ್ನು ಆಚರಿಸಬಹುದು. ಹೋಳಿ ಆಡುವುದಕ್ಕಿಂತ ಮೊದಲು ಎಣ್ಣೆ ಹಚ್ಚಿಕೊಂಡರೆ ಕೂದಲು ಮತ್ತು ಚರ್ಮವು ಹಾನಿಯಾಗದಂತೆ ತಡೆಯಬಹುದು.

ಹೋಳಿ ಪಾರ್ಟಿಯನ್ನು ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು!

ಅತಿಥಿಗಳ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ: ಹೋಳಿ ಆಡುವುದರಿಂದ ಬೇಗನೆ ಸುಸ್ತಾಗುತ್ತದೆ. ನೀವು ಹೋಳಿ ಆಡಲು ಆಹ್ವಾನಿಸಿದ ಅತಿಥಿಗಳು ಸುಸ್ತಾಗಿ ಹೋಳಿಯ ಹಬ್ಬದ ಮೂಡ್​ ಅನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಅತಿಥಿಗಳಿಗೆ ರುಚಿಕರವಾದ ತಿನಿಸುಗಳನ್ನು ಬಡಿಸಿ ಅವರ ಉತ್ಸಾಹ ಜೀವಂತವಾಗಿರಿಸುತ್ತದೆ. ಹಾಗೇ ಗರಿಗರಿಯಾದ ರುಚಿಕರ ತಿಂಡಿ ಜೊತೆಗೆ ಲಸ್ಸಿ, ಸೋಡಾದಂತಹ ತಂಪು ಪಾನೀಯಗಳನ್ನು ಅತಿಥಿಗಳಿಗೆ ನೀಡಿ.

ಹೋಳಿ ಪಾರ್ಟಿಯನ್ನು ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು!

ವಿಶೇಷ ಹಾಡುಗಳನ್ನು ಆಯ್ಕೆಮಾಡಿ: ಸಂಗೀತವು ನಿಮ್ಮ ಹೋಳಿ ಪಾರ್ಟಿಯ ಹೃದಯ ಬಡಿತವಾಗಿರಲಿ!, ಲವಲವಿಕೆಯ, ಉತ್ಸಾಹಭರಿತ ಮತ್ತು ಹಬ್ಬದ ವೈಬ್​ಗಳಿಂದ ತುಂಬಿರುವ ಹಾಡುಗಳನ್ನು ಆಯ್ದುಕೊಳ್ಳಿ. ಕನ್ನಡದ ಕ್ಲಾಸಿಕ್​ ಮತ್ತು ಸಮಕಾಲೀನ ಹಿಟ್​ ಸಾಂಗ್​ಗಳನ್ನು ಯೋಚಿಸಿ. ಪ್ರತಿಯೊಬ್ಬರು ಹಾಡಿಗೆ ಲಯಕ್ಕೆ ತಕ್ಕಂತೆ ನೃತ್ಯ ಮಾಡುತ್ತಾರೆ.

ಹೋಳಿ ಪಾರ್ಟಿಯನ್ನು ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು!

ನೆನಪುಗಳನ್ನು ಸೆರೆಹಿಡಿಯಿರಿ:ಒಂದು ಚಿತ್ರವು ಸಾವಿರ ಪದಗಳಿಗೆ ಸಮ ಎಂದು ಹೇಳುತ್ತಾರೆ. ಹೋಳಿ ಆಡುವ ಅಮೂಲ್ಯವಾದ ಕ್ಷಣಗಳನ್ನು ಕ್ಯಾಮರದಲ್ಲಿ ಸೆರೆಹಿಡಿಯಿರಿ. ಆ ನೆನಪುಗಳು ಜೀವಮಾನವಿಡೀ ಉಳಿಯುತ್ತದೆ.

ಹೋಳಿ ಪಾರ್ಟಿಯನ್ನು ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು!

ಇದನ್ನೂ ಓದಿ:ಬಣ್ಣದಿಂದ ನಿಮ್ಮ ಚರ್ಮ ಮತ್ತು ಕೂದಲು ರಕ್ಷಿಸಿಕೊಳ್ಳುವುದು ಹೇಗೆ ಗೊತ್ತಾ?

ABOUT THE AUTHOR

...view details