ಸಹರಾನ್‌ಪುರ:ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲಾ ಕಾರಾಗೃಹದ 23 ಕೈದಿಗಳಿಗೆ ಮಾರಣಾಂತಿಕ ಹೆಚ್‌ಐವಿ ಸೋಂಕು ತಗುಲಿದೆ. ಇದನ್ನು ಆರೋಗ್ಯ ಇಲಾಖೆಯೇ ದೃಢಪಡಿಸಿದ್ದು, ಜೈಲು ಅಧಿಕಾರಿಗಳನ್ನು ಕಂಗೆಡಿಸಿದೆ. ಸೋಂಕಿನ ಮೂಲದ ಬಗ್ಗೆ ಪತ್ತೆ ಮಾಡಲು ಆದೇಶಿಸಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಮಾಹಿತಿ ರವಾನಿಸಲಾಗಿದೆ.
ಜೂನ್ 15 ರಂದು ಸಹರಾನ್‌ಪುರ ಜಿಲ್ಲಾ ಕಾರಾಗೃಹದಲ್ಲಿ ಒಂದು ವಾರ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಈ ವೇಳೆ, ನಡೆಸಿದ ತಪಾಸಣೆಯಲ್ಲಿ ಕೈದಿಗಳಿಗೆ ಏಡ್ಸ್ ಇರುವುದು ಗೊತ್ತಾಗಿದೆ. ಸೋಂಕಿತ ಕೈದಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದರ ಜೊತೆಗೆ, ಕಾರಾಗೃಹದಲ್ಲಿರುವ 2200 ಕೈದಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.
23 ಖೈದಿಗಳಿಗೆ ಹೆಚ್‌ಐವಿ ಪಾಸಿಟಿವ್ ಕಂಡು ಬಂದಿದ್ದರಲ್ಲಿ ಹೆಚ್ಚಿನ ಖೈದಿಗಳು ಬೆಹತ್, ಗಂಗೋಹ್, ನಕುದ್ ಮತ್ತು ದಿಯೋಬಂದ್‌ನಿಂದ ಬಂದವರಾಗಿದ್ದು, ಆರೋಗ್ಯ ಇಲಾಖೆ ಈಗ ಅವರ ಹಿನ್ನೆಲೆಯನ್ನು ಸಂಗ್ರಹಿಸುತ್ತಿದೆ. ಈ ಕೈದಿಗಳ ಚಿಕಿತ್ಸೆಗಾಗಿ ಜೈಲು ಆಡಳಿತವು ಎಆರ್‌ಟಿ ಕೇಂದ್ರಕ್ಕೆ ಪತ್ರವನ್ನೂ ಬರೆದಿದೆ.