ಐದು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಎರಡನೇ ದಿನವನ್ನು ನರಕ ಚತುರ್ದಶಿ ಆಚರಿಸಲಾಗುತ್ತದೆ. ಪ್ರೀತಿಯಿಂದ ಈ ಹಬ್ಬವನ್ನು ಛೋಟಿ ದೀಪಾವಳಿ ಎಂದು ಕರೆಯಲಾಗುತ್ತಿದೆ. ನರಕ ಚತುರ್ದಶಿಯನ್ನು ಧನ್ತೇರಸ್ ನಂತರದ ದಿನ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಅಕ್ಟೋಬರ್ 23 ರಂದು ಸಂಜೆ 6:40 ಕ್ಕೆ ಪ್ರಾರಂಭವಾಗಿ, ಅಕ್ಟೋಬರ್ 24 ರಂದು ಸಂಜೆ 5:28 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ನರಕ ಚತುರ್ದಶಿಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ.
ರಾಕ್ಷಸ ರಾಜ ನರಕಾಸುರನ ಮೇಲೆ ಶ್ರೀಕೃಷ್ಣನ ವಿಜಯದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು14 ವರ್ಷಗಳ ವನವಾಸದ ನಂತರ ಭಗವಾನ್ ರಾಮನು ಹಿಂದಿರುಗಿದ ಸುದ್ದಿಯೊಂದಿಗೆ ಹನುಮಂತನು ಅಯೋಧ್ಯೆ ತಲುಪಿದನು ಎಂದು ನಂಬಲಾಗಿದೆ. ಈ ಹಬ್ಬವನ್ನು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಆಚರಣೆಗಳನ್ನು ಬಳಸಿ ಆಚರಿಸಲಾಗುತ್ತದೆ.
ಪುರಾಣಗಳಲ್ಲಿ ಹಬ್ಬದ ಬಗ್ಗೆ ಏನು ಹೇಳಲಾಗಿದೆ;ಪುರಾಣಗಳ ಪ್ರಕಾರ, ಭಗವಾನ್ ಇಂದ್ರನನ್ನು ಸೋಲಿಸಿ ಅದಿತಿ ದೇವಿಯ ಕಿವಿಯೋಲೆಗಳನ್ನು ಕಿತ್ತುಕೊಂಡ ನಂತರ ರಾಕ್ಷಸ ರಾಜ ನರಕಾಸುರನು ಪ್ರಾಗ್ಜ್ಯೋತಿಷಪುರದ ಆಡಳಿತಗಾರನಾದನು. ನರಕಾಸುರನು ದೇವತೆಗಳ ಮತ್ತು ಋಷಿಗಳ 16000 ಹೆಣ್ಣು ಮಕ್ಕಳನ್ನು ಅಪಹರಿಸಿ ಸೆರೆಮನೆಗೆ ಹಾಕಿದನು.
ನರಕ ಚತುರ್ದಶಿಯ ಮುನ್ನಾದಿನದಂದು ಶ್ರೀಕೃಷ್ಣನು ನರಕಾಸುರನನ್ನು ಸತ್ಯಾಭಾಮ ಸಹಾಯದಿಂದ ಕೊಂದನು. 16000 ಒತ್ತೆಯಾಳುಗಳನ್ನು ಸೆರೆಯಿಂದ ಮುಕ್ತಗೊಳಿಸಿದನು ಮತ್ತು ಅದಿತಿ ದೇವಿಯ ಅಮೂಲ್ಯವಾದ ಕಿವಿಯೋಲೆಗಳನ್ನು ಸಹ ಮರಳಿ ಪಡೆದನು. ಈ ದಿನವನ್ನು ದುಷ್ಟನನ್ನು ಸಂಹವರಿಸಿ ವಿಜಯವನ್ನು ಪಡೆದ ದಿನವಾದ್ದರಿಂದ ವಿಜಯದ ಸಂಕೇತವಾಗಿ ಹಬ್ಬವನ್ನು ಆಚರಿಸುತ್ತಾರೆ.