ಕರ್ನಾಟಕ

karnataka

ETV Bharat / bharat

ದೊಂಡರಾಯದಲ್ಲಿ ಹಿಂದೂ ಮುಸ್ಲಿಮರ ಅದ್ಧೂರಿ ದೀಪಾವಳಿ.. ಎಲ್ಲೆಡೆ ಪ್ರಶಂಸೆ - ದೀಪಾವಳಿ ಹಬ್ಬದ ಸ್ನೇಹಮಿಲನ ಔತಣಕೂಟ

ಬೀಡ್ ಜಿಲ್ಲೆಯ ದೊಂಡರಾಯದ ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಒಂದಾಗಿ ದೀಪಾವಳಿ ಹಬ್ಬದ ಸ್ನೇಹಮಿಲನ ಔತಣಕೂಟ ಏರ್ಪಡಿಸಿ, ಸೌಹಾರ್ದತೆಗೆ ಸಾಕ್ಷಿಯಾದರು. ಗ್ರಾಮಸ್ಥರು ಸುಶಿಕ್ಷಿತರಾಗಿದ್ದು ,ಆಯಿ ಆಯಿ ದೊಂಡರೈ ಎಂಬ ವಾಟ್ಸ್​ಆ್ಯಪ್​​ ಗ್ರೂಪ್ ಆರಂಭಿಸಿ ವಿವಿಧ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಸ್ನೇಹಮಿಲನ ಕಾರ್ಯಕ್ರಮವೂ ಒಂದು.

ದೊಂಡರಾಯ ಹಿಂದೂ ಮುಸ್ಲಿಂರು ಸೇರಿ  ದೀಪಾವಳಿ  ಆಚರಣೆ
Dhondarai Hindu Muslim brothers celebrated Diwali programEtv Bharat

By

Published : Oct 29, 2022, 10:57 AM IST

Updated : Oct 29, 2022, 11:08 AM IST

ಬೀಡ್(ಮಹಾರಾಷ್ಟ್ರ):ಹಿಂದೂ ಮುಸ್ಲಿಂ ಸಮುದಾಯದವರು ಒಂದಾಗಿ ಸಾಮಾಜಿಕ ವಿಶಿಷ್ಟ ಸಂಪ್ರದಾಯ ದೀಪಾವಳಿ ಹಬ್ಬದ ನಿಮಿತ್ತ ಸ್ನೇಹಮಿಲನ ಕಾರ್ಯಕ್ರಮವನ್ನು ಬೀಡ್ ಜಿಲ್ಲೆಯ ಗೆವ್ರಾಯಿ ತಾಲೂಕಿನ ದೊಂಡರಾಯದಲ್ಲಿ ಸಂಭ್ರಮದಿಂದ ಆಚರಿಸಿದರು. ಹಲವಾರು ವರ್ಷಗಳಿಂದ ಧೋಂಡರೈ ಗ್ರಾಮದ ನಾನಾ ಹಬ್ಬಗಳಲ್ಲೂ ಸ್ನೇಹಮಿಲನ್ ಕಾರ್ಯಕ್ರಮ ಆಯೋಜಿಸುತ್ತಿದ್ದು ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಆಯಿ ಆಯಿ ದೊಂಡರೈ ಎಂಬ ವಾಟ್ಸ್​ಆ್ಯಪ್​ ಗ್ರೂಪ್:ಹಿಂದೂ ಹಬ್ಬಗಳಲ್ಲಿ,ಮುಸ್ಲಿಂರ ಹಬ್ಬಗಳಲ್ಲಿ ಔತಣಕೂಟದ ಹಮ್ಮಿಕೊಳ್ಳುವ ಮೂಲಕ ಈ ಸ್ನೇಹಮಿಲನ್ ನಡೆಯುತ್ತಿದೆ. ದೊಂಡರಾಯ ಗ್ರಾಮಸ್ಥರು ಸುಶಿಕ್ಷಿತರಾಗಿದ್ದು, ಆಯಿ ಆಯಿ ದೊಂಡರೈ ಎಂಬ ವಾಟ್ಸ್​ಆ್ಯಪ್​ ಗ್ರೂಪ್ ಆರಂಭಿಸಿದ್ದಾರೆ. ಈ ಗ್ರೂಪ್ ಮೂಲಕ ಹಳ್ಳಿಗಳಲ್ಲಿ ನಾನಾ ಸಾಮಾಜಿಕ ಕಾರ್ಯಗಳನ್ನು ಏರ್ಪಡಿಸುತ್ತಿದ್ದು, ಅದರಲ್ಲಿ ಸ್ನೇಹಮಿಲನ ಕಾರ್ಯಕ್ರಮವೂ ಒಂದು.

ಐಕ್ಯತೆ ಸಾರುವ ಸ್ನೇಹಮಿಲನ: ಹಿಂದೂ ಮುಸ್ಲಿಂ ಐಕ್ಯತೆಯನ್ನು ಹೇಗೆ ಕಾಪಾಡುವವರು ಎಂಬುದಕ್ಕೆ ದೊಂಡರಾಯ ಊರಿನ ಹೆಸರು ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ಏಳು ವರ್ಷಗಳಿಂದ ದೊಂಡರಾಯನ ಹಿಂದೂ ಮುಸ್ಲಿಂ ಸಮುದಾಯದವರು ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ಸೌಹಾರ್ದತೆ ಕಾಪಾಡಲು ಹಿಂದೂ ಎನ್ನದೇ ಹಿಂದೂಸ್ತಾನಿ ಎಂಬ ಮಂತ್ರ ಜಪಿಸುವುದು ಸುತ್ತಲಿನ ಗ್ರಾಮಗಳಿಗೂ ಪಸರಿಸಿದೆ. ಆದರೆ, ಈ ಬಾರಿ ದೀಪಾವಳಿ ನಿಮಿತ್ತ ಗ್ರಾಮದ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಆಯೋಜಿಸಿದ್ದ ಸ್ನೇಹಮಿಲನ ಕಾರ್ಯಕ್ರಮ ಪ್ರಚಾರ ಪಡೆದು, ಮೆಚ್ಚುಗೆ ಗಳಿಸಿದ್ದಂತೂ ಸತ್ಯ.

ಇದನ್ನು ಓದಿ: ಛತ್​ ಪೂಜಾ ಪೆಂಡಾಲ್​ಗಾಗಿ ಶಾಸಕರ ಮಧ್ಯೆ ಹೊಯ್​ ಕೈ.. ಜಿಲ್ಲಾಧ್ಯಕ್ಷ ಸೇರಿ ಹಲವರಿಗೆ ಗಾಯ.. VIDEO

Last Updated : Oct 29, 2022, 11:08 AM IST

ABOUT THE AUTHOR

...view details