ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿನ ಮಶ್ಡಾದ ಗುಡ್ಡಗಾಡು ಪ್ರದೇಶದ ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ನಿಖರ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ಆದ್ರೆ ಅನಿಲ ಸೋರಿಕೆಯೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಸ್ತುತ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮೊದಲು ಒಂದು ಮನೆಯಲ್ಲಿ ಬೆಂಕಿ ಕಂಡು ಬಂದಿದ್ದು, ಸುತ್ತಮುತ್ತಲಿನ ಜನರು ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ. ಆದ್ರೂ ಬೆಂಕಿಯನ್ನು ನಿಯಂತ್ರಿಸಲಾಗಲಿಲ್ಲ. ಮನೆಯ ಕೆಳಗಿನ ಮಹಡಿಯಲ್ಲಿದ್ದ ಬೆಂಕಿ ಬಳಿಕ ಮೇಲಿನ ಮಹಡಿಗೂ ಹಬ್ಬಿದೆ. ಇದರಿಂದಾಗಿ ಸುತ್ತಮುತ್ತಲಿನ ಮನೆಗಳಿಗೂ ಬೆಂಕಿ ತಗುಲಿದೆ.