ಕರ್ನಾಟಕ

karnataka

ETV Bharat / bharat

ಹಿಮಾಚಲ ಪ್ರದೇಶ: ರೋಹ್ಲಿ ಜಿಲ್ಲೆಯಲ್ಲಿ ಹಿಮಪಾತ: ರಸ್ತೆ ಸಂಚಾರದಲ್ಲಿ ವ್ಯತ್ಯಯ - ಹಿಮಪಾತ: ರಸ್ತೆಗಳು ಬಂದ್

ರೋಹ್ಲಿ ಜಿಲ್ಲೆಯ ಲಾಹೌಲ್ ಮತ್ತು ಸ್ಪಿತಿಯಲ್ಲಿ ಹಿಮಪಾತ ಸಂಭವಿಸಿದ್ದು, ರಸ್ತೆಗಳು ಮುಚ್ಚಿಕೊಂಡಿದೆ ಎಂದು ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರ ತನ್ನ ಅಧಿಕೃತ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದೆ. ಒಟ್ಟು 119 ಜನರನ್ನು ರಕ್ಷಿಸಲಾಗಿದ್ದು, ಸ್ಥಳದಲ್ಲಿ ಹಳವು ವಾಹನಗಳು ಸಿಲುಕಿರುವ ಮಾಹಿತಿ ಲಭಿಸಿದೆ.

himachal-pradesh-avalanche-hits-rohli-blocks-roads
ಹಿಮಾಚಲ ಪ್ರದೇಶ : ರೋಹ್ಲಿ ಜಿಲ್ಲೆಯಲ್ಲಿ ಹಿಮಪಾತ,ರಸ್ತೆ ಸಂಚಾರ ವ್ಯತ್ಯಯ

By

Published : Mar 8, 2022, 9:39 AM IST

ಶಿಮ್ಲಾ (ಹಿಮಾಚಲ ಪ್ರದೇಶ): ರೋಹ್ಲಿ ಜಿಲ್ಲೆಯ ಲಾಹೌಲ್ ಮತ್ತು ಸ್ಪಿತಿಯಲ್ಲಿ ಹಿಮಪಾತ ಸಂಭವಿಸಿದ್ದು, ರಸ್ತೆಗಳು ಸಂಪೂರ್ಣವಾಗಿ ಹಿಮದಲ್ಲಿ ಹುದುಗಿ ಹೋಗಿವೆ ಎಂದು ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಜೊತೆಗೆ ರಾಜ್ಯ ಹೆದ್ದಾರಿ 26 ರ ಕಾಡು ನಾಲಾದಲ್ಲಿ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ತಡೆ ಉಂಟಾಗಿದೆ ಎಂದು ವರದಿಯಾಗಿದೆ. ರೋಹ್ಲಿ ಮತ್ತು ಕಾಡು ನಾಲಾ ನಡುವೆ ಸುಮಾರು 5-6 ವಾಹನಗಳು ಸಿಲುಕಿಕೊಂಡಿರುವುದಾಗಿ ವರದಿಯಾಗಿವೆ. ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಒಟ್ಟು 119 ಜನರನ್ನು ರಕ್ಷಿಸ ಕರೆತರಲಾಗಿದ್ದು, ಭೂಕುಸಿತದಿಂದ 16 ವಾಹನಗಳು ಸ್ಥಳದಲ್ಲಿ ಸಿಲುಕಿಕೊಂಡಿವೆ ಎಂದು ಲಾಹೌಲ್-ಸ್ಪಿತಿ ಎಸ್.ಪಿ ಮಾನವ್ ವರ್ಮಾ ಹೇಳಿದ್ದಾರೆ.

ಓದಿ :ಏ ಕುಳಿತುಕೊಳ್ಳಿ, ನಾವು ನಿಮ್ಮ ಬಜೆಟ್​ ಭಾಷಣ ಕೇಳಿಲ್ವಾ: ಅಶೋಕ್, ಸಿದ್ದರಾಮಯ್ಯ ಮಧ್ಯ ಹಾಸ್ಯದ ಜಟಾಪಟಿ

ABOUT THE AUTHOR

...view details