ಕರ್ನಾಟಕ

karnataka

ETV Bharat / bharat

ಹೈ ಪ್ರೊಫೈಲ್ ಸೆಕ್ಸ್ ರಾಕೆಟ್​​: ಬೆಂಗಳೂರಿನ ಹೆಣ್ಣುಮಗಳು ಸೇರಿ 11 ಯುವತಿಯರು, ಓರ್ವ ಕಿಂಗ್​ಪಿನ್​ ಬಂಧನ - ಛತ್ತೀಸ್​ಗಢ ಹೈ ಪ್ರೊಫೈಲ್ ಸೆಕ್ಸ್ ದಂಧೆ

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಬೆಂಗಳೂರು ಸೇರಿದಂತೆ 11 ಯುವತಿಯರ ಬಂಧನ ಮಾಡಿದ್ದು, ಓರ್ವ ಕಿಂಗ್​ಪಿನ್ ಬಲೆಗೆ ಬಿದ್ದಿದ್ದಾನೆ. ಈ ವೇಳೆ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.

high profile sex racket exposed in raipur
high profile sex racket exposed in raipur

By

Published : Jul 25, 2022, 4:08 PM IST

Updated : Jul 25, 2022, 4:21 PM IST

ರಾಯ್ಪುರ್​(ಛತ್ತೀಸ್​ಗಢ):ಹೈ ಪ್ರೊಫೈಲ್ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ರಾಯ್ಪುರ್​​ ಅಪರಾಧ ನಿಗ್ರಹ ಮತ್ತು ಸೈಬರ್​ ಘಟಕ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 11 ಯುವತಿಯರು ಹಾಗೂ ಓರ್ವ ಕಿಂಗ್​​ಪಿನ್​ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೋಟೆಲ್​​​ನಲ್ಲಿ ಈ ಅಕ್ರಮ ವ್ಯಾಪಾರ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಅದರ ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ.

11 ಯುವತಿಯರು, ಓರ್ವ ಕಿಂಗ್​ಪಿನ್​ ಬಂಧನ

ರಾಯ್ಪುರ್​​ದ ಪ್ರಮುಖ ಫೋರ್​​​ಸ್ಟಾರ್​​ ಹೋಟೆಲ್​​ನಲ್ಲಿ ಹೈ-ಪ್ರೊಫೈಲ್​ ಸೆಕ್ಸ್ ರಾಕೆಟ್ ದಂಧೆ ನಡೆಸಲಾಗ್ತಿತ್ತು. ಇಂದು ಬೆಳಗ್ಗೆ ಪೊಲೀಸರು ದಿಢೀರ್​ ದಾಳಿ ನಡೆಸಿದ್ದು, ಈ ವೇಳೆ ಬೆಂಗಳೂರಿನ ಓರ್ವ ಯುವತಿ ಸೇರಿದಂತೆ 11 ಹುಡುಗಿಯರು ಹಾಗೂ ಓರ್ವ ಕಿಂಗ್​ ಪಿನ್​ ಬಲೆಗೆ ಬಿದ್ದಿದ್ದಾರೆ.

ಬಂಧಿತ ಯುವತಿಯರು ಮೂಲತಃ ನೇಪಾಳ, ಮುಂಬೈ, ದೆಹಲಿ, ಗುಜರಾತ್​ ಮತ್ತು ಬೆಂಗಳೂರು ಮೂಲದವರು ಎಂದು ವರದಿಯಾಗಿದೆ. ಇವರೆಲ್ಲರೂ ಸೆಕ್ಸ್ ರಾಕೆಟ್ ದಂಧೆಗೆ ಇಳಿದಿದ್ದರು. ಬಂಧಿತ ಹುಡುಗಿಯರ ಮೊಬೈಲ್​ ಫೋನ್​​ಗಳಲ್ಲಿನ ಚಾಟ್ ಸಂದೇಶ ಚೆಕ್​ ಮಾಡಿರುವ ಪೊಲೀಸರಿಗೆ ಶಾಕ್ ಆಗಿದ್ದು, ಇದರಲ್ಲಿ ಕೆಲ ರಾಜಕೀಯ ನಾಯಕರ ಹೆಸರು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅವರ ಹೆಸರು ಬಹಿರಂಗ ಪಡಿಸಿಲ್ಲ.

ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಅಡ್ಡೆ ಮೇಲೆ ಪೊಲೀಸ್ ದಾಳಿ

ರಾಜಕೀಯ ನಾಯಕರ ನಂಟು:ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿರುವ ಯುವತಿಯರು ಅನೇಕ ರಾಜಕೀಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದು, ಅವರು ಬಳಕೆ ಮಾಡ್ತಿದ್ದ ಮೊಬೈಲ್​ ಫೋನ್​​ಗಳಿಂದ ಈ ಮಹತ್ವದ ಮಾಹಿತಿ ಹೊರಬಿದ್ದಿದೆ. ಆದರೆ, ಯಾವೆಲ್ಲ ರಾಜಕೀಯ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಹೊರಹಾಕಿಲ್ಲ.

ಇದನ್ನೂ ಓದಿರಿ: ಹೈ ಪ್ರೊಫೈಲ್ ಸೆಕ್ಸ್ ರಾಕೆಟ್​​ ಬಯಲಿಗೆಳೆದ ಸಿಸಿಬಿ ತಂಡ: ಇಬ್ಬರು ನಟಿಯರು ಸೇರಿ ಐವರ ಬಂಧನ

ಹೋಟೆಲ್​​ನಲ್ಲಿ ಸೆಕ್ಸ್​ ದಂಧೆ ನಡೆಯುತ್ತಿದ್ದ ಬಗ್ಗೆ ರಾಯ್ಪುರ್​​ ಪೊಲೀಸ್​ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕಕ್ಕೆ ದೂರು ನೀಡಲಾಗಿತ್ತು. ಇದಕ್ಕೋಸ್ಕರ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಎಸ್​​​ಎಸ್​ಪಿ ಅಭಿಷೇಕ್​​ ಮಹೇಶ್ವರಿ ಅವರ ಸೂಚನೆಯಂತೆ ಹೋಟೆಲ್​ಗೆ ವಿಶೇಷ ತಂಡ ಲಗ್ಗೆಹಾಕಿತ್ತು. ಈ ವೇಳೆ, ದಂಧೆ ನಡೆಯುತ್ತಿರುವುದು ಕಂಡು ಬಂದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಅಪರಾಧಿಗಳ ಬಂಧನ ಮಾಡಿದ್ದಾರೆ.

Last Updated : Jul 25, 2022, 4:21 PM IST

ABOUT THE AUTHOR

...view details