ಪುಣೆ(ಮಹಾರಾಷ್ಟ್ರ):ತರಬೇತಿಯಲ್ಲಿದ್ದ ವೈದ್ಯೆಯ ಮಲಗುವ ಕೋಣೆ ಮತ್ತು ಸ್ನಾನದ ಕೋಣೆಯಲ್ಲಿ ಗುಪ್ತವಾಗಿ ಕೆಮರಾ ಅಳವಡಿಸಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆ ನಗರದ ಭಾರತಿ ಯುನಿವರ್ಸಿಟಿ ಆಸ್ಪತ್ರೆಯ ಹಿರಿಯ ವೈದ್ಯನೊಬ್ಬನನ್ನು ಬಂಧಿಸಲಾಗಿದೆ.
ಸುಜಿತ್ ಅಬಾಜಿರಾವ್ ಜಗ್ತಾಪ್ (42) ಬಂಧಿತ ಆರೋಪಿಯಾಗಿದ್ದು, 32 ವರ್ಷದ ತರಬೇತಿಯಲ್ಲಿದ್ದ ವೈದ್ಯೆ ಭಾರತಿ ಯುನಿವರ್ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಈ ದೂರಿನ ಅನ್ವಯ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ತಿಲಕ್ ರಸ್ತೆಯ ಹೀರಾಬಾಗ್ ಚೌಕ್ನಲ್ಲಿ ಆಸ್ಪತ್ರೆಯೊಂದನ್ನು ಹೊಂದಿದ್ದು, ಭಾರತಿ ಯುನಿವರ್ಸಿಟಿ ಆಸ್ಪತ್ರೆಗೆ ಪಾಠಗಳನ್ನು ಮಾಡಲು ತೆರಳುತ್ತಿದ್ದನು. ಯುವತಿಯೂ ಭಾರತಿ ಯುನಿವರ್ಸಿಟಿ ಆವರಣದಲ್ಲಿರುವ ವಸತಿಯೊಂದರಲ್ಲಿ ವಾಸವಾಗಿದ್ದಳು. ಆರೋಪಿ ಅಮೆಜಾನ್ನಲ್ಲಿ ಹಿಡನ್ ಕೆಮರಾ ಇರುವ ಬಲ್ಬ್ಗಳನ್ನು ಕೊಂಡು, ಯುವತಿ ಪಾಠ ಕೇಳಲು ತೆರಳಿದ್ದಾಗ, ಆಕೆಯ ರೂಮ್ಗೆ ಆ ಬಲ್ಬ್ಗಳನ್ನು ಅಳವಡಿಸಿದ್ದಾನೆ ಎನ್ನಲಾಗಿದೆ.