ಕರ್ನಾಟಕ

karnataka

ETV Bharat / bharat

ಇಂಡೋ - ಪಾಕ್ ಗಡಿಯಿಂದ 2 ಕಿಮೀ ದೂರದಲ್ಲಿ ಹೈಟೆಕ್ ಡ್ರೋನ್​ ಹೊಡೆದುರುಳಿಸಿದ ಪೊಲೀಸರು: 5 ಕೆಜಿ ಹೆರಾಯಿನ್​ ಜಪ್ತಿ

ಭಾರತ ಮತ್ತು ಪಾಕಿಸ್ತಾನ ಗಡಿಯಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಪಂಜಾಬ್​ನ ಕಕ್ಕರ್ ಗ್ರಾಮದ ಸಮೀಪ ಪೊಲೀಸರು ಹಾಗೂ ಬಿಎಸ್‌ಎಫ್‌ ಸೈನಿಕರು ಜಂಟಿ ಕಾರ್ಯಾಚರಣೆ ನಡೆಸಿ, ಹೆಕ್ಸಾಕಾಪ್ಟರ್ ಡ್ರೋನ್

Etv Bharat
Etv Bharat

By

Published : Jan 22, 2023, 10:10 PM IST

ಚಂಡೀಗಢ (ಪಂಜಾಬ್​): ಭಾರತ ಮತ್ತು ಪಾಕಿಸ್ತಾನ ಗಡಿದಲ್ಲಿ ಅಕ್ರಮ ಮಾದಕ ವಸ್ತು ಸಾಗಣೆ ಯತ್ನ ಮುಂದುವರೆದಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಹೆರಾಯಿನ್​ಅನ್ನು ಹೊತ್ತ ಬರುತ್ತಿದ್ದ ಮತ್ತೊಂದು ಹೈಟೆಕ್ ಡ್ರೋನ್​​ಅನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡು ತಿಂಗಳೊಳಗೆ ಪತ್ತೆಯಾದ ಆರನೇ ಡ್ರೋನ್ ಇದಾಗಿದೆ.

ಇದನ್ನೂ ಓದಿ:ಗಡಿಯಾಚೆಗಿನ ಡ್ರಗ್ಸ್​ ದಂಧೆಯ ಕಿಂಗ್​ ಪಿನ್​ಗಳ ಸೆರೆ: 10 ಕೆಜಿ ಹೆರಾಯಿನ್, 20 ಲಕ್ಷದ ಅಮೆರಿಕನ್ ಡ್ರೋನ್ ಜಪ್ತಿ

ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಅಮೃತಸರ ಗ್ರಾಮಾಂತರ ಪೊಲೀಸರು ಡ್ರೋನ್ ಚಲನೆಯನ್ನು ಗಮನಿಸಿದ್ದಾರೆ. ಆಗ ತಕ್ಷಣವೇ ಎಚ್ಚೆತ್ತುಕೊಂಡು ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಯೋಧರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಂತರ ಪಂಜಾಬ್ ಪೊಲೀಸರು ಹಾಗೂ ಬಿಎಸ್‌ಎಫ್‌ ಸೈನಿಕರು ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಗಡಿಯಿಂದ ಕೇವಲ 2 ಕಿಮೀ ಡ್ರೋನ್​​ ಪತ್ತೆ: ಇಂಡೋ-ಪಾಕ್ ಗಡಿಯಿಂದ ಕೇವಲ 2 ಕಿಮೀ ದೂರದಲ್ಲಿರುವ ಕಕ್ಕರ್ ಗ್ರಾಮದ ಬಳಿ ಡ್ರೋನ್ ಚಲನವಲನ ಪತ್ತೆಯಾಗಿದೆ. ಅಂತೆಯೇ, ಶೋಧ ಕಾರ್ಯವನ್ನು ಪೊಲೀಸರು ಹಾಗೂ ಬಿಎಸ್‌ಎಫ್‌ ಯೋಧರು ಚುರುಕುಗೊಳಿಸಿದ್ದಾರೆ. ಈ ವೇಳೆ ಪೊಲೀಸರು ಎಕೆ 47 ಗನ್​ನಿಂದ 12 ಸುತ್ತು ಗುಂಡಿನ ದಾಳಿ ಮಾಡಿ ಡ್ರೋಣ್​ನನ್ನು ಹೊಡೆದುರುಳಿಸಿದ್ದಾರೆ. ಅಲ್ಲದೇ, ಡ್ರೋಣ್​​ ಹೊತ್ತು ತರುತ್ತಿದ್ದ ಐದು ಕೆಜಿ ಹೆರಾಯಿನ್​ಅನ್ನು ಜಪ್ತಿ ಮಾಡಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

10 ಲಕ್ಷ ಮೌಲ್ಯದ ಹೈಟೆಕ್ ಡ್ರೋನ್​:ಭದ್ರತಾ ಪಡೆಗಳು ಹೊಡೆದುರುಳಿಸಿರುವ ಹೆಕ್ಸಾಕಾಪ್ಟರ್ ಡ್ರೋನ್ ಹೈಟೆಕ್​ ಆಗಿದ್ದು, ಇದರ ಮಾರುಕಟ್ಟೆ ಮೌಲ್ಯ 10 ಲಕ್ಷ ರೂಪಾಯಿ. ಅಲ್ಲದೇ, ಇದು ರೆಕ್ಕೆಗಳ ಡ್ರೋನ್​ ಆಗಿದ್ದು, ಅಮೆರಿಕ ಮತ್ತು ಚೀನಾದಲ್ಲಿ ತಯಾರಿಸಿದ ಬಿಡಿಭಾಗಗಳೊಂದಿಗೆ ಜೋಡಿಸಿ ಸಿದ್ಧಪಡಿಸಲಾಗಿದೆ ಎಂದು ಐಜಿಪಿ ಗೌರವ್ ಯಾದವ್ ಹೇಳಿದ್ದಾರೆ. ಇಷ್ಟೇ ಅಲ್ಲ, ಈ ಡ್ರೋಣ್​ ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್ ಮತ್ತು ಇನ್‌ಫ್ರಾರೆಡ್ ಆಧಾರಿತ ಕತ್ತಲೆಯ ದೃಶ್ಯಗಳನ್ನು ಸೆರೆಹಿಡಿಯುವ ಕ್ಯಾಮರಾ ಹೊಂದಿದೆ. ಜೊತೆಗೆ ಜಿಪಿಎಸ್ ಸಿಸ್ಟಮ್ ಸೇರಿದಂತೆ ಹೈಟೆಕ್ ವೈಶಿಷ್ಟ್ಯಗಳು ಈ ಡ್ರೋನ್​ನಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸೆರೆಸಿಕ್ಕಿ ಇಬ್ಬರು ಆರೋಪಿಗಳು:ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅಮೃತಸರ ಗ್ರಾಮಾಂತರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸ್ವಪನ್ ಶರ್ಮಾ ನೀಡಿದ್ದು, ಈ ಕಾರ್ಯಾಚರಣೆ ಸಂಬಂಧದಲ್ಲಿ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಖದೀಮರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಪೊಲೀಸರು ಸುತ್ತುವರೆದು ಹಿಡಿದಿದ್ದಾರೆ. ಈ ಡ್ರೋನ್ ಮೂಲಕ ಹೆರಾಯಿನ್ ರವಾನಿಸಿ ಪಾಕ್ ಕಳ್ಳಸಾಗಣೆದಾರರು ಮತ್ತು ಹೆರಾಯಿನ್​ ಭಾರತದ ಗಡಿಯಲ್ಲಿ ಸ್ವೀಕರಿಸಲು ಸಜ್ಜಾಗಿದ್ದ ಭಾರತೀಯ ಸಹಚರರನ್ನು ಪತ್ತೆ ಹೆಚ್ಚಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಈ ಬಗ್ಗೆ ಅಮೃತಸರ ಗ್ರಾಮಾಂತರದ ಲೋಪೋಕ್‌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇನ್ನು, ಇದೇ ತಿಂಗಳ 15ರಂದು ಹೆರಾಯಿನ್​ಅನ್ನು ಹೊತ್ತ ಬರುತ್ತಿದ್ದ ಡ್ರೋಣ್​​ ಭದ್ರತಾ ಸಿಬ್ಬಂದಿ ಹೊಡೆದುರುಳಿಸಿ, ಸುಮಾರು 30 ಕೋಟಿ ಮೌಲ್ಯದ ಹೆರಾಯಿನ್​ ವಶಕ್ಕೆ ಪಡೆದಿದ್ದರು. ಕಳೆದ 15ರಂದು ಅಕ್ರಮ ಮಾದಕ ವಸ್ತು ದಂಧೆಯ ಇಬ್ಬರು ಕಿಂಗ್​ ಪಿನ್​ಗಳ ಸಮೇತವಾಗಿ 10 ಕೆಜಿ ಹೆರಾಯಿನ್​ ಹಾಗೂ ಅಮೆರಿಕದಲ್ಲಿ ನಿರ್ಮಿತ ಡ್ರೋನ್​ಅನ್ನು ಜಪ್ತಿ ಮಾಡಲಾಗಿತ್ತು.

ಇದನ್ನೂ ಓದಿ:ಪಾಕ್​ ಗಡಿಯಲ್ಲಿ ಡ್ರೋನ್​ ಹೊಡೆದುರುಳಿಸಿ 30 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ

ABOUT THE AUTHOR

...view details