ಕರ್ನಾಟಕ

karnataka

ETV Bharat / bharat

ಉತ್ತರಾಖಂಡದಲ್ಲಿ ಮತ್ತೆ ಮೇಘ ಸ್ಫೋಟ.. ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ದೌಡು..! - ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ

ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದು, ಶ್ರೀನಗರದಿಂದ ಎಸ್‌ಡಿಆರ್‌ಎಫ್ ತೆರಳುತ್ತಿದೆ.

ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ
ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ

By

Published : May 11, 2021, 7:18 PM IST

Updated : May 11, 2021, 7:24 PM IST

ದೇವಪ್ರಯಾಗ್:ಉತ್ತರಾಖಂಡದ ದಶರಥ ದಂಡ ಪರ್ವತ ಎಂಬ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿ, ಕೋಟ್ಯಂತರ ರೂ ಆಸ್ತಿ, ಪಾಸ್ತಿ ನಷ್ಟ ಸಂಭವಿಸಿದೆ.

ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ

ದೊಡ್ಡ ಬಂಡೆಗಳು ಉರುಳಿ ಕ್ಯಾಂಟುರಾ ಸ್ವೀಟ್ ಶಾಪ್, ಅಸ್ವಾಲ್ ಜ್ಯುವೆಲ್ಲರ್ಸ್ ಸೇರಿ ಪೀಠೋಪಕರಣದ ಅಂಗಡಿಗಳು ಹಾನಿಗೊಳಗಾಗಿವೆ.

ಕೂಡಲೇ ಕ್ರಮ ಕೈಗೊಂಡ ಪೊಲೀಸರು, ಹಾನಿ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಸದ್ಯ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಸ್ಥಳದಲ್ಲೇ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಶ್ರೀನಗರದಿಂದ ಎಸ್‌ಡಿಆರ್‌ಎಫ್ ತಂಡ ತೆರಳುತ್ತಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

Last Updated : May 11, 2021, 7:24 PM IST

ABOUT THE AUTHOR

...view details