ಕರ್ನಾಟಕ

karnataka

ETV Bharat / bharat

ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದರೆ 6 ಕೋಟಿ ರೂ. ಬಹುಮಾನ... ಈ ರಾಜ್ಯದಿಂದ ಘೋಷಣೆ - ಹರಿಯಾಣ ಸರ್ಕಾರ

ಅಂತಾರಾಷ್ಟ್ರೀಯ ಒಲಿಂಪಿಕ್​ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಅವರೊಂದಿಗೆ ಸೇರಿ ಒಲಿಂಪಿಕ್​ ಪದಕ ವಿಜೇತರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಸಂದೀಪ್​ ಸಿಂಗ್​ ಈ ವಿಷಯ ಪ್ರಕಟಿಸಿದ್ದಾರೆ.

Haryana Govt
Haryana Govt

By

Published : Jun 23, 2021, 9:09 PM IST

ಚಂಡೀಗಢ(ಹರಿಯಾಣ):ಪ್ರಸಕ್ತ ವರ್ಷ ನಡೆಯುವ ಟೊಕಿಯೋ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುವಿಗೆ 6 ಕೋಟಿ. ರೂ ಬಹುಮಾನ ನೀಡುವುದಾಗಿ ಹರಿಯಾಣ ಸರ್ಕಾರ ಘೋಷಣೆ ಮಾಡಿದೆ. ಜತೆಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹರಿಯಾಣ ಕ್ರೀಡಾ ಸಚಿವ ಸಂದೀಪ್​ ಸಿಂಗ್​, ಮುಂಬರುವ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ 6 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಉಳಿದಂತೆ ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 2.5 ಕೋಟಿ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ಸಮುದ್ರದಲ್ಲಿ ಸಿಕ್ಕ ಸಣ್ಣದೊಂದು ಮೀನು... 2.60 ಲಕ್ಷ ರೂ.ಗೆ ಹರಾಜು

ಅಂತಾರಾಷ್ಟ್ರೀಯ ಒಲಿಂಪಿಕ್​ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಅವರೊಂದಿಗೆ ಸೇರಿ ಒಲಿಂಪಿಕ್​ ಪದಕ ವಿಜೇತರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಸಂದೀಪ್​ ಸಿಂಗ್​ ಈ ವಿಷಯ ಪ್ರಕಟಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಭಾಗವಹಿಸುತ್ತಿರುವ ರಾಜ್ಯದ 30 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ತಯಾರಿಗೋಸ್ಕರ ನೀಡಲಾಗಿದೆ ಎಂದಿರುವ ಅವರು, ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ವಿಜೇತರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದಿದ್ದಾರೆ. ರಾಜ್ಯದಲ್ಲಿ ಕ್ರೀಡೆ ಉತ್ತೇಜಿಸಲು ಸರ್ಕಾರ ಹೊಸ ನೀತಿ ರೂಪಿಸಿದ್ದು, ಇದರಲ್ಲಿ ಶೇ. 3ರಷ್ಟು ಮೀಸಲಾತಿ ಇಡಲಾಗಿದೆ ಎಂದರು.

ABOUT THE AUTHOR

...view details