ಕರ್ನಾಟಕ

karnataka

ETV Bharat / bharat

ಒಂದೇ ಕುಟುಂಬದ ಐವರ ಸಾವು: ಪತಿ - ಪತ್ನಿ ನೇಣು, ವಿಷ ಸೇವಿಸಿದ ಮಕ್ಕಳು

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯಲ್ಲಿ ನಡೆದಿದೆ.

haryana palwal district five people in a family commit suicide with three children
ಒಂದೇ ಕುಟುಂಬದ ಐವರು ಸಾವು: ಪತಿ-ಪತ್ನಿ ನೇಣು, ವಿಷ ಸೇವಿಸಿದ ಮಕ್ಕಳು

By

Published : Sep 29, 2021, 11:50 AM IST

Updated : Sep 29, 2021, 12:19 PM IST

ಪಲ್ವಾಲ್(ಹರಿಯಾಣ): ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯ ಔರಂಗಾಬಾದ್​ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತಿ ಮತ್ತು ಪತ್ನಿ ನೇಣ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಕ್ಕಳು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪತಿ ಮತ್ತು ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ತಡರಾತ್ರಿ ಜಗಳ ತಾರಕಕ್ಕೇರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಕ್ಕಳಿಗೆ ವಿಷ ನೀಡಿದ್ದಾರೆ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:ಕೋವಿಡ್ ವ್ಯಾಕ್ಸಿನ್ ಬದಲಿಗೆ ಆ್ಯಂಟಿ ರೇಬಿಸ್ ಚುಚ್ಚುಮದ್ದು: ನರ್ಸ್, ವೈದ್ಯ ಅಮಾನತು

Last Updated : Sep 29, 2021, 12:19 PM IST

ABOUT THE AUTHOR

...view details