ಅಹಮದಾಬಾದ್ (ಗುಜರಾತ್):ಗುಜರಾತ್ನಲ್ಲಿ ಬೃಹತ್ ಕ್ರಿಕೆಟ್ ಬೆಟ್ಟಿಂಗ್ ಜಾಲವೊಂದು ಬಯಲಾಗಿದೆ. ಕ್ರಿಕೆಟ್ ಬುಕ್ಕಿಗಳು ನಕಲಿ ಬ್ಯಾಂಕ್ಗಳನ್ನು ಖಾತೆ ತೆರೆದು 1,400 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿದ ದಂಧೆಯನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿದ್ದಾರೆ. ಕೆಲವು ಬುಕ್ಕಿಗಳು ದುಬೈನಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುವುದನ್ನೂ ಪೊಲೀಸರು ಬಯಲು ಮಾಡಿದ್ದಾರೆ.
ಇದನ್ನೂ ಓದಿ:ಆನ್ಲೈನ್ ಗೇಮಿಂಗ್ ಕಂಪೆನಿಗಳು ಬೆಟ್ಟಿಂಗ್ನಲ್ಲಿ ಭಾಗವಹಿಸಲು ಅವಕಾಶವಿಲ್ಲ: ರಾಜೀವ್ ಚಂದ್ರಶೇಖರ್
ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ದೊಡ್ಡ ಬುಕ್ಕಿಗಳಾದ ರಾಕೇಶ್ ರಾಜ್ದೇವ್ ಅಲಿಯಾಸ್ ಆರ್ಆರ್ ಮತ್ತು ಟಾಮಿ ಪಟೇಲ್ ಸೇರಿದಂತೆ ಐವರನ್ನು ಪೊಲೀಸರು ಗುರುತಿಸಿದ್ದಾರೆ. ಈ ಬಗ್ಗೆ ಅಹಮದಾಬಾದ್ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಚೈತನ್ಯ ಮಾಂಡಲಿಕ್ ಮಾತನಾಡಿ, ಕ್ರಿಕೆಟ್ ಬುಕ್ಕಿ 20 ವಿವಿಧ ಬ್ಯಾಂಕ್ಗಳಲ್ಲಿ ನಕಲಿ ದಾಖಲೆಗಳ ಮೂಲಕ ನಕಲಿ ಖಾತೆಗಳನ್ನು ತೆರೆದು ಹಣದ ದಂಧೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಆಕಾಶ್ ಓಜಾ ಎಂಬುವರ ಹೆಸರಿನಲ್ಲಿ ಇಂಡೂಸಿಂಡ್ ಬ್ಯಾಂಕ್ನ ಓಧವ್ ಶಾಖೆಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಆಕಾಶ್ ಅವರ ಅನುಮತಿಯಿಲ್ಲದೆ ಈ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಇದಕ್ಕೆ ಅವರ ಗುರುತಿನ ಚೀಟಿಗಳನ್ನೂ ಬಳಸಲಾಗಿದೆ. ಜೊತೆಗೆ ಆಕಾಶ್ ಓಜಾ ಅವರ ಸಹಿಯನ್ನು ನಕಲು ಮಾಡಲಾಗಿದೆ. ಈ ಬ್ಯಾಂಕ್ ಖಾತೆಯಿಂದ 2022ರ ಏಪ್ರಿಲ್ ಮತ್ತು ಜುಲೈ ತಿಂಗಳ ನಡುವೆ 170 ಕೋಟಿ ರೂಪಾಯಿ ವಹಿವಾಟು ನಡೆಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
ಆಕಾಶ್ ಓಜಾ ದಾಖಲೆಗಳ ಪಡೆದಿದ್ದು ಹೇಗೆ?: ಆಕಾಶ್ ಓಜಾ ಬ್ಯಾಂಕ್ ಸಾಲ ಪಡೆಯಲು ಬಂದಾಗ ಆರೋಪಿಗಳಲ್ಲಿ ಒಬ್ಬರಾದ ಆಶಿಕ್ ಅಲಿಯಾಸ್ ರವಿ ಪಟೇಲ್ ಮತ್ತು ಇನ್ನೊಬ್ಬ ಆರೋಪಿ ಕರ್ಮೇಶ್ ಪಟೇಲ್ ಸಂಕರ್ಪಕ್ಕೆ ಬಂದಿದ್ದಾರೆ. ಇದೇ ವೇಳೆ, ಆಕಾಶ್ ಓಜಾ ವೈಯಕ್ತಿಕ ದಾಖಲೆಗಳನ್ನೂ ಈ ಖದೀಮರು ಪಡೆದುಕೊಂಡಿದ್ದಾರೆ. ನಂತರ ಇದೇ ದಾಖಲೆಗಳನ್ನು ಅನೇಕ ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆಯಲು ರವಿ, ಕರ್ಮೇಶ್, ರಾಕೇಶ್ ರಾಜ್ದೇವ್, ಖನ್ನಾಜಿ ಮತ್ತು ಹರಿಕೃಷ್ಣ ಪಟೇಲ್ ಬಳಸುತ್ತಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ದುಬೈಗೆ ಹಣ ವರ್ಗಾವಣೆ: ಅಷ್ಟೇ ಅಲ್ಲ, ಮೆಹುಲ್ ಪೂಜಾರ ಎಂಬ ಮತ್ತೊಬ್ಬ ಬುಕ್ಕಿ ಶ್ರೀಶಕ್ತಿ ಎಂಟರ್ಪ್ರೈಸ್, ನೋವಾ ಎಂಟರ್ಪ್ರೈಸ್ ಮತ್ತು ಇತರ ಹಲವು ಸಂಸ್ಥೆಗಳ ಹೆಸರಿನಲ್ಲಿ ಇಂತಹ ಹಲವು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದೂ ಬಯಲಾಗಿದೆ. ಈ ಖಾತೆಗಳಿಂದ ಕನಿಷ್ಠ 1,414 ಕೋಟಿ ರೂಪಾಯಿ ವಹಿವಾಟು ನಡೆಸಲಾಗಿದೆ. ಬೆಟ್ಟಿಂಗ್ ಹಣ ಪಾವತಿಗಾಗಿ ದುಬೈಗೆ ಈ ಹಣ ವರ್ಗಾವಣೆ ಮಾಡಲು ಈ ಖಾತೆಗಳನ್ನು ಬಳಸಲಾಗಿದೆ ಎಂಬುವುದಾಗಿ ಎಂದು ತಿಳಿದುಬಂದಿದೆ ಎಂದು ವಿವರಿಸಿದ್ದಾರೆ.
ಲುಕ್ಔಟ್ ನೋಟಿಸ್ ಜಾರಿಗೆ ಸಿದ್ಧತೆ: ಸದ್ಯ ಕ್ರಿಕೆಟ್ ಬೆಟ್ಟಿಂಗ್ ಜಾಲದ ವಿರುದ್ಧ ಗುರುವಾರ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಇದರಿಂದ ಕೆಲವು ಬುಕ್ಕಿಗಳು ದುಬೈನಿಂದ ಕಾರ್ಯಾಚರಣೆ ನಡೆಸುತ್ತಿದ್ದರು ಎಂಬುವುದೂ ಪತ್ತೆಯಾದ ಹಿನ್ನೆಲೆಯಲ್ಲಿ ಇಂತಹ ಬುಕ್ಕಿಗಳ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡುವಂತೆ ಪೊಲೀಸ್ ಇಲಾಖೆಯು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಹ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಬೆಟ್ಟಿಂಗ್: ಅಡವು ಇಟ್ಟಿದ್ದ ಚಿನ್ನಾಭರಣ ಎಗರಿಸಿದ್ದ ಗೋಲ್ಡ್ ಫೈನ್ಸಾನ್ ಮ್ಯಾನೇಜರ್ ಬಂಧನ