ಅಹಮದಾಬಾದ್: ಗುಜರಾತ್ನಲ್ಲಿಂದು ಎರಡನೇ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದ್ದು, 81 ಪುರಸಭೆ, 31 ಜಿಲ್ಲಾ ಪಂಚಾಯತ್‌ಗಳು ಮತ್ತು 231 ತಾಲೂಕು ಪಂಚಾಯತ್‌ಗಳಿಗೆ ಮತದಾನವಾಗಲಿದೆ.
ಪುರಸಭೆಗಳ 680 ವಾರ್ಡ್, ಜಿಲ್ಲಾ ಪಂಚಾಯತ್‌ಗಳ 980 ಹಾಗೂ ತಾಲೂಕು ಪಂಚಾಯತ್‌ಗಳ 4,773 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಮಾರ್ಚ್ 2 ರಂದು ಫಲಿತಾಂಶ ಹೊರಬೀಳಲಿದ್ದು, 8,473 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಆಡಳಿತ ಪಕ್ಷ ಬಿಜೆಪಿಗೆ ಈ ಸ್ಥಳೀಯ ಸಂಸ್ಥೆ ಚುನಾವಣೆ ಬಹುಮುಖ್ಯವಾಗಿದೆ.