ಗೋಧ್ರಾ:ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಆಪ್ ಧೂಳೀಪಟವಾಗಿದೆ. ಬಿಜೆಪಿಗೆ ಸವಾಲಾಗಿದ್ದ ಗೋಧ್ರಾ ಕ್ಷೇತ್ರದಲ್ಲಿ ಅಭ್ಯರ್ಥಿ ಸಿಕೆ ರೌಲ್ಜಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ನ ರಶ್ಮಿತಾಬೆನ್ ಚೌಹಾಣ್ ಅವರಿಗಿಂತ 25 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದ್ದಾರೆ.
20 ವರ್ಷಗಳ ಹಿಂದೆ ದೇಶದ ಅತ್ಯಂತ ಭೀಕರವಾದ ಘಟನೆಗಳಲ್ಲಿ ಗೋಧ್ರಾ ಹತ್ಯಾಕಾಂಡ ಒಂದಾಗಿದೆ. ಇಲ್ಲಿ ನಡೆದ ಕೋಮುಗಲಭೆಯಲ್ಲಿ ರೈಲಿಗೆ ಬೆಂಕಿ ಬಿದ್ದು ನೂರಾರು ಜನರು ಸಾವಪ್ಪಿದ್ದರು. ಬಳಿಕ ನಡೆದ ದಂಗೆಯಲ್ಲಿ ನೂರಾರು ಜನರು ಹತ್ಯೆಯಾಗಿದ್ದರು. ಹೀಗಾಗಿ ಇದು ಕೋಮು ಸೂಕ್ಷ್ಮ ಕ್ಷೇತ್ರವಾಗಿ ಗುರುತಿಸಿಕೊಂಡಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ರೌಲ್ಜಿ ಅವರು 2007 ರಿಂದ 2016 ರವರೆಗೆ ಕಾಂಗ್ರೆಸ್ ಶಾಸಕರಾಗಿದ್ದರು. ಬಳಿಕ 2017 ರಲ್ಲಿ ಬಿಜೆಪಿ ಮೂಲಕ ಸ್ಪರ್ಧಿಸಿ ಶಾಸಕರಾಗಿದ್ದರು. ಗೋಧ್ರಾದಲ್ಲಿ ಕೋಮು ಗಲಭೆಗಳು ಇನ್ನೂ ಜೀವಂತವಾಗಿವೆ. ಧರ್ಮ ಆಧಾರದ ಮೇಲೆ ಇಲ್ಲಿ ನಡೆದ ಮತದಾನದಲ್ಲಿ ಬಿಜೆಪಿ ಮತ್ತೆ ಗೆಲುವು ಸಾಧಿಸಿದ್ದು ಅಚ್ಚರಿಯೇ ಸರಿ.