ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಕೋವಿಡ್ ಲಸಿಕೆ ಆರಂಭಿಸುವ ಮುನ್ನ ಸರಬರಾಜು ಹೆಚ್ಚಿಸಲು ಭಾರತ್ ಬಯೋಟೆಕ್, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಂತಹ ವ್ಯಾಕ್ಸಿನ್ ತಯಾರಿಕಾ ಕಂಪನಿಗಳಿಗೆ ಮುಂಗಡವಾಗಿ 4,500 ಕೋಟಿ ರೂ. ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಜುಲೈಯೊಳಗಾಗಿ ಸೀರಮ್ ಕಂಪನಿಯು 20 ಕೋಟಿ ಕೋವಿಶೀಲ್ಡ್ ಡೋಸ್‌ಗಳನ್ನು ಪೂರೈಸಲಿದ್ದು, ಭಾರತ್ ಬಯೋಟೆಕ್ ಇನ್ನೂ 9 ಕೋಟಿ ಡೋಸ್‌ಗಳನ್ನು ಸರಬರಾಜು ಮಾಡಲಿದೆ. ಈಗಾಗಲೇ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವಂತೆ ಈ ಕಂಪನಿಗಳು ಪ್ರತಿ ಡೋಸ್ಗೆ 150 ರೂ. ದರದಲ್ಲೇ ಲಸಿಕೆ ಪೂರೈಸಲಿದೆ.