ಕರ್ನಾಟಕ

karnataka

ETV Bharat / bharat

10 ಸಾವಿರ ಕೇಳಿದ ಆಂಬ್ಯುಲೆನ್ಸ್‌ ಚಾಲಕ; ಮಗನ ಶವ ಹೊತ್ತು ಬೈಕ್​ನಲ್ಲೇ 90 ಕಿಮೀ ಸಾಗಿದ ಬಡಪಾಯಿ ತಂದೆ! - ತಿರುಪತಿ ಆರ್​​ಯುಐಎ ಆಸ್ಪತ್ರೆ

ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 10 ವರ್ಷದ ಮಗನ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್​​ನವರು 10 ಸಾವಿರ ರೂ. ಬೇಡಿಕೆ ಇಟ್ಟಿದ್ದು, ಇಷ್ಟೊಂದು ಹಣ ನೀಡಲು ಸಾಧ್ಯವಾಗದ ಕಾರಣ ಬಡಪಾಯಿ ತಂದೆಯೋರ್ವ ಬೈಕ್ ಮೇಲೆಯೇ ಮಗನ ಮೃತದೇಹವನ್ನು 90 ಕಿಲೋ ಮೀಟರ್ ದೂರು​ ಸಾಗಿಸಿದರು.

man carries son body on bike
man carries son body on bike

By

Published : Apr 26, 2022, 6:59 PM IST

ತಿರುಪತಿ(ಆಂಧ್ರಪ್ರದೇಶ): ದೇಶದ ಬಹುತೇಕ ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಆಸ್ಪತ್ರೆಗಳಲ್ಲಿ ಹಣಕ್ಕೆ ಹೆಚ್ಚಿನ ಮಹತ್ವ. ಲಂಚ ನೀಡಿದ್ರೆ ಮಾತ್ರ ಕೆಲಸಗಳು ಆದಷ್ಟು ಬೇಗ ನಡೆಯುತ್ತವೆ. ಇಲ್ಲವಾದರೆ, ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್​ ಹೋಗಬೇಕು. ಇದಕ್ಕೆ ಹೊಸ ನಿದರ್ಶನ ಇಲ್ಲಿದೆ ನೋಡಿ..

ಅನಾರೋಗ್ಯದ ಕಾರಣ ಆಂಧ್ರಪ್ರದೇಶದ ತಿರುಪತಿಯಲ್ಲಿನ ಆರ್​​ಯುಐಎ ಸರ್ಕಾರಿ ಜನರಲ್​ ಆಸ್ಪತ್ರೆಯಲ್ಲಿ 10 ವರ್ಷದ ಬಾಲಕ ಜೇಸವಾ ಸಾವನ್ನಪ್ಪಿದ್ದ. ಆತನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಲು ಆಸ್ಪತ್ರೆಯ ಆ್ಯಂಬುಲೆನ್ಸ್​ ಚಾಲಕ 10 ಸಾವಿರ ರೂಪಾಯಿ ಕೇಳಿದ್ದಾನೆ. ಆದರೆ, ಇಷ್ಟೊಂದು ಹಣ ನೀಡಲು ಸಾಧ್ಯವಾಗದ ಕಾರಣ ವ್ಯಕ್ತಿ ಮಗನ ಮೃತದೇಹವನ್ನು ಹೊತ್ತು ಬೈಕ್​ನಲ್ಲೇ ಸುಮಾರು 90 ಕಿಲೋ ಮೀಟರ್ ಸಾಗಿದ್ದಾರೆ.

ಮಗನ ಮೃತದೇಹವನ್ನು ಅಪ್ಪಿಕೊಂಡು ಬೈಕ್​ ಹಿಂಬದಿಯಲ್ಲಿ ಕುಳಿತುಕೊಂಡು ಸಾಗುತ್ತಿರುವ ವಿಡಿಯೋ ತುಣುಕನ್ನು ಆಂಧ್ರಪ್ರದೇಶದ ಪ್ರತಿಪಕ್ಷದ ನಾಯಕ ಎನ್​.ಚಂದ್ರಬಾಬು ನಾಯ್ಡು ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದ್ದು, ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸಚಿವರು, ಅಧಿಕಾರಿಗಳು 3 ತಿಂಗಳೊಳಗೆ ಆಸ್ತಿ ಘೋಷಿಸಿ: ಸಿಎಂ ಯೋಗಿ ಆದೇಶ

ತಿರುಪತಿಯ ಆರ್​ಯುಐಎ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಮಗು ಜೇಸವಾನಿಗೋಸ್ಕರ ನನ್ನ ಹೃದಯ ಕಲಕಿದೆ. ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡುವಂತೆ ತಿಳಿಸಿದ್ರೂ ಅದು ಸಾಧ್ಯವಾಗಿಲ್ಲ. ಬಡತನದಿಂದ ಕಂಗೆಟ್ಟ ತಂದೆಗೆ ಬೇರೆ ದಾರಿಯಿಲ್ಲದೆ ಆ ಮಗುವನ್ನು ಬೈಕ್ ಮೇಲಿಟ್ಟುಕೊಂಡೇ ಸಾಗಿರುವುದು ನಿಜಕ್ಕೂ ಆಂಧ್ರಪ್ರದೇಶದ ಆಸ್ಪತ್ರೆಗಳಲ್ಲಿನ ಆರೋಗ್ಯ ಮೂಲಸೌಕರ್ಯಗಳ ದುಸ್ಥಿತಿಯನ್ನು ಪ್ರಶ್ನಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details