ಕರ್ನಾಟಕ

karnataka

ETV Bharat / bharat

ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ 7.30 ಕೆಜಿ ಅಕ್ರಮ ಚಿನ್ನ ಜಪ್ತಿ - ಶ್ರೀಲಂಕಾದ ಪ್ರಜೆಗಳು ಚಿನ್ನವನ್ನು ಸಾಗುತ್ತಿದ್ದರು

ಹೈದರಾಬಾದ್​ನ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾದ ಪ್ರಜೆಗಳ ಬಳಿ 3.80 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆಯಾಗಿದೆ.

gold-worth-rs-3-dot-80-crore-seized-at-shamshabad-airport
ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ 7.30 ಕೆಜಿ ಅಕ್ರಮ ಚಿನ್ನ ಜಪ್ತಿ

By

Published : Aug 25, 2022, 5:31 PM IST

ಹೈದರಾಬಾದ್​ (ತೆಲಂಗಾಣ): ಇಲ್ಲಿನ ಶಂಷಾಬಾದ್ ಸಮೀಪದ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಅಕ್ರಮವಾಗಿ ಸಾಗಿಸುತ್ತಿದ್ದ 7 ಕೆಜಿಗೂ ಅಧಿಕ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ಜಪ್ತಿ ಮಾಡಿದ್ದು, ಈ ಸಂಬಂಧ 9 ಜನರನ್ನು ಬಂಧಿಸಲಾಗಿದೆ.

ಯುಎಲ್​ 175 ವಿಮಾನದಲ್ಲಿ ಬಂದಿಳಿದ ಶ್ರೀಲಂಕಾದ ಪ್ರಜೆಗಳು ಚಿನ್ನವನ್ನು ಸಾಗುತ್ತಿದ್ದರು. ಈ ಬಗ್ಗೆ ಸಂಶಯಗೊಂಡು ತಪಾಸಣೆ ನಡೆಸಿದಾಗ 3.80 ಕೋಟಿ ರೂ. ಮೌಲ್ಯದ 7.30 ಕೆಜಿ ಬಂಗಾರ ಪತ್ತೆಯಾಗಿದೆ ಎಂದು ಕಸ್ಟಮ್ಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ದೇಹದೊಳಗೆ ಬಚ್ಚಿಟ್ಟು ₹45 ಲಕ್ಷ ಮೌಲ್ಯದ ಚಿನ್ನ ಸಾಗಾಟ, ಮಂಗಳೂರಿನಲ್ಲಿ ಆರೋಪಿ ವಶಕ್ಕೆ

ABOUT THE AUTHOR

...view details