Gold Price Today: ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಚಿನ್ನ,ಬೆಳ್ಳಿ ಇಂದಿನ ದರಪಟ್ಟಿ - ಬೆಳ್ಳಿ ಬೆಲೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆ 44,550 ರೂ. ಇದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 48,600 ರೂ. ಇದೆ.
ಇಂದಿನ ಚಿನ್ನ-ಬೆಳ್ಳಿ ಬೆಲೆ
By
Published : Aug 29, 2021, 12:06 PM IST
ಬೆಂಗಳೂರು:ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಗಸ್ಟ್ 12ರಿಂದ ಬೆಲೆ ಹೆಚ್ಚಾಗುತ್ತಲೇ ಇದೆ. ಇಂದು ಮುಂಜಾನೆ ವೇಳೆಗೆ ಚಿನ್ನದ ಬೆಲೆ ಗ್ರಾಂಗೆ (24 ಕ್ಯಾರೆಟ್) 4,765 ರೂ. ದಾಖಲಾಗಿದೆ.
ಬೆಂಗಳೂರಿನಲ್ಲಿ ಬಂಗಾರದ ಬೆಲೆ:
ನಗರದಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆ 44,550 ರೂ. ದಾಖಲಾಗಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 48,600 ರೂ. ನಿಗದಿಯಾಗಿದೆ.
ಬೆಳ್ಳಿ ಬೆಲೆ:
ಇಂದು ದೇಶಾದ್ಯಂತ ಬೆಳ್ಳಿ ಬೆಲೆ 63,800 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ ಅಷ್ಟೇ ಮೌಲ್ಯವಿದ್ದು, ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂನಲ್ಲಿ 68,700 ರೂ. ದಾಖಲಾಗಿದೆ.