ಕರ್ನಾಟಕ

karnataka

ETV Bharat / bharat

ವೃದ್ಧ ದಂಪತಿ ಶವವಾಗಿ ಪತ್ತೆ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ, ನಗ್ನ ಸ್ಥಿತಿಯಲ್ಲಿ ಬಿದ್ದಿದ್ದ ಪತಿ - ಈಟಿವಿ ಭಾರತ ಕನ್ನಡ ನ್ಯೂಸ್​​

ವೃದ್ಧ ದಂಪತಿ ಶವವಾಗಿ ಪತ್ತೆಯಾಗಿರುವ ಘಟನೆ ಗಾಜಿಯಾಬಾದ್ ನಗರದಲ್ಲಿ ನಡೆದಿದೆ.

Ghaziabad: Elderly couple found dead at their home, daughter remains clueless
ವೃದ್ಧ ದಂಪತಿ ಶವವಾಗಿ ಪತ್ತೆ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ, ನಗ್ನ ಸ್ಥಿತಿಯಲ್ಲಿ ಬಿದ್ದಿದ್ದ ಪತಿ

By

Published : Nov 22, 2022, 10:06 PM IST

ಗಾಜಿಯಾಬಾದ್: ವೃದ್ಧ ದಂಪತಿ ಶವವಾಗಿ ಪತ್ತೆಯಾಗಿರುವ ಘಟನೆ ಗಾಜಿಯಾಬಾದ್ ನಗರದ ಚರ್ಚ್ ಕಾಲೋನಿಯ ಮನೆಯೊಂದರಲ್ಲಿ ಮಂಗಳವಾರ ನಡೆದಿದೆ. ದಂಪತಿಯ ಮಗಳು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಇಬ್ರಾಹಿಂ ಮತ್ತು ಪತ್ನಿ ಹಜ್ರಾ ಎಂದು ಗುರುತಿಸಲಾಗಿದ್ದು, ಇವರು ಸ್ಕ್ರ್ಯಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಮಂಗಳವಾರ ಬೆಳಗ್ಗೆ ಇಬ್ರಾಹಿಂ ಮೃತದೇಹ ನಗ್ನ ಸ್ಥಿತಿಯಲ್ಲಿ ಹಾಗೂ ಪತ್ನಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಾನು ಬೆಳಗ್ಗೆ 6 ಗಂಟೆ ಸುಮಾರಿಗೆ ಹಾಲು ಖರೀದಿಸಿ ಮನೆಗೆ ಹಿಂದಿರುಗಿದಾಗ ತಂದೆ ಶವವಾಗಿ ಬಿದ್ದಿದ್ದರು. ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲ. ಇದರಿಂದ ತಾಯಿಯನ್ನು ಹುಡುಕಲು ಆರಂಭಿಸಿ ಮನೆಯ ಹೊರಗೆ ಓಡಿದೆ. ಆಗ ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು ಎಂದು ಮಗಳು ರಹೀಮಾ ಹೇಳಿದ್ದಾರೆ.

ಈ ವಿಷಯ ತಿಳಿದ ಗಾಜಿಯಾಬಾದ್‌ ಎಸ್‌ಎಸ್‌ಪಿ ಮುನಿರಾಜ್, ಫೋರೆನ್ಸಿಕ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ. ದಂಪತಿ ಕೊಲೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ತನಿಖೆಗಾಗಿ ಗ್ರಾಮಾಂತರ ಎಸ್‌ಪಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ ಎಂದು ಮುನಿರಾಜ್​ ತಿಳಿಸಿದರು.

ಇದನ್ನೂ ಓದಿ :ಅಂತರ್ಜಾತಿ ವಿವಾಹ..12 ದಿನದಲ್ಲಿ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಮಗಳ ಹತ್ಯೆ.. ಚಿತೆಗೆ ಬೆಂಕಿಯಿಟ್ಟ ಕೊಲೆಗಾರ ಅಪ್ಪ

ABOUT THE AUTHOR

...view details