ಅಲ್ಲೂರಿ ಸೀತಾರಾಮರಾಜ್: ಗಾಂಜಾ ಸಾಗಾಟ ಮಾಡುತ್ತಿದ್ದ ಕಾರೊಂದು ಕೆರೆಗೆ ಹಾರಿದ ಘಟನೆ ಜಿಲ್ಲೆಯ ರಂಪಚೋಡವರಂ ವಲಯದ ಭೂಪತಿಪಾಲೆಂನಲ್ಲಿ ನಡೆದಿದೆ. ಆಂಧ್ರ-ಒಡಿಶಾ ಗಡಿಯಿಂದ ಗಾಂಜಾ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಹಿಂಬಾಲಿಸಿದ್ದಾರೆ. ಇದನ್ನು ಗಮನಿಸಿದ ಕಾರು ಚಾಲಕ ವೇಗವಾಗಿ ವಾಹನ ಚಲಾಯಿಸುತ್ತಿದ್ದ. ಭೂಪತಿಪಾಲೆಂನಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಸಮೀಪದ ಜಲಾಗಾರಕ್ಕೆ ಹಾರಿ ಬಿದ್ದಿದೆ.
ಪೊಲೀಸರ ಚೇಸ್ಗೆ ಹೆದರಿ ಗಾಂಜಾ ಸಾಗಿಸುತ್ತಿದ್ದ ಕಾರನ್ನು ಕೆರೆಗೆ ನುಗ್ಗಿಸಿದ ಚಾಲಕ
ಗಾಂಜಾ ಸಾಗಾಟ ಮಾಡುತ್ತಿದ್ದ ಕಾರೊಂದನ್ನು ಪೊಲೀಸರು ಬೆನ್ನತ್ತಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಚಾಲಕ ಕಾರನ್ನು ಕೆರೆಗೆ ನುಗ್ಗಿಸಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜ್ ಜಿಲ್ಲೆಯಲ್ಲಿ ನಡೆದಿದೆ.
ಗಾಂಜಾ ಸಾಗಾಟ ಮಾಡುತ್ತಿದ್ದ ಕಾರ್
ಇದನ್ನೂ ಓದಿ:ವಾಹನ ಡಿಕ್ಕಿ ಹೊಡೆದು ಬಾಲಕಿ ಸಾವು: ಜೀವಂತವಾಗಿ ಚಾಲಕನ ಸುಟ್ಟ ಗ್ರಾಮಸ್ಥರು!
ಕಾರಿನಲ್ಲಿದ್ದ ಓರ್ವ ವ್ಯಕ್ತಿ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೀರಿಗೆ ಬಿದ್ದ ವಾಹನವನ್ನು ಕ್ರೇನ್ ಸಹಾಯದಿಂದ ಹೊರತೆಗೆಯಲಾಗಿದ್ದು, ಪೊಲೀಸರು 300 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.