ಹೋಶಂಗಾಬಾದ್(ಮಧ್ಯಪ್ರದೇಶ):ಸರ್ಕಾರಿ ಆಸ್ಪತ್ರೆಯಲ್ಲೇ ನಾಲ್ವರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ನಲ್ಲಿ ನಡೆದಿದೆ. ಅದರ ವಿಡಿಯೋ ಇದೀಗ ವೈರಲ್ ಆಗಿದೆ.
ವಾರಗಿತ್ತಿಯರ ಫೈಟ್... ಆಸ್ಪತ್ರೆಯಲ್ಲೇ ಜಡೆ ಹಿಡಿದು ಹೊಡೆದಾಡಿಕೊಂಡ ಮಹಿಳೆಯರು! - ನಾಲ್ವರು ಮಹಿಳೆಯರು ಫೈಟ್
ನಾಲ್ವರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡುರುವ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ನಲ್ಲಿ ನಡೆದಿದೆ.
Women's fight in Hoshangabad district hospital
ಯಾವ ಕಾರಣಕ್ಕಾಗಿ ಇವರು ಜಗಳವಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಜಗಳವಾಡಿರುವ ಮಹಿಳೆಯರಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದ್ದು, ಮತ್ತೋರ್ವಳು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಇವರೊಂದಿಗೆ ಸೇರಿಕೊಂಡು ಮತ್ತೋರ್ವ ಮಹಿಳೆ ಕೂಡ ಜಗಳವಾಡಿದ್ದಾಳೆ.
ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.