ಕರ್ನಾಟಕ

karnataka

ETV Bharat / bharat

ರೈಲ್ವೆ ನಿಲ್ದಾಣದಲ್ಲಿ ಸ್ಫೋಟ: ನಾಲ್ವರು CRPF ಸಿಬ್ಬಂದಿಗೆ ಗಾಯ - Chhattisgarh news

ಡಿಟೋನೇಟರ್ ಸ್ಥಳಾಂತರಿಸುವ ವೇಳೆ ಲಘು ಸ್ಫೋಟ ಸಂಭವಿಸಿ ನಾಲ್ವರು ಸಿಆರ್​ಪಿಎಫ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ರಾಯ್‌ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ರೈಲ್ವೆ ನಿಲ್ದಾಣದಲ್ಲಿ ಸ್ಫೋಟ
ರೈಲ್ವೆ ನಿಲ್ದಾಣದಲ್ಲಿ ಸ್ಫೋಟ

By

Published : Oct 16, 2021, 10:57 AM IST

ರಾಯ್‌ಪುರ (ಛತ್ತೀಸ್‌ಗಢ): ರಾಯ್‌ಪುರ ರೈಲ್ವೆ ನಿಲ್ದಾಣದಲ್ಲಿ ಲಘು ಸ್ಫೋಟ ಸಂಭವಿಸಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್)ನ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ 6.30ರ ವೇಳೆಗೆ ಸಿಆರ್‌ಪಿಎಫ್‌ನ 122ನೇ ಬೆಟಾಲಿಯನ್ ಸಿಬ್ಬಂದಿ ಡಿಟೋನೇಟರ್ ಸ್ಥಳಾಂತರಿಸಲೆಂದು ಜಮ್ಮುವಿಗೆ ತೆರಳಲು ವಿಶೇಷ ರೈಲು ಹತ್ತಿದ್ದಾರೆ. ರೈಲು ಹೊರಡುವ ಮುನ್ನ ಇಗ್ನೈಟರ್ ಸೆಟ್​ವುಳ್ಳ ಬಾಕ್ಸ್ ಬೋಗಿಯೊಳಗೆ ಬಿದ್ದಿದ್ದು, ಈ ವೇಳೆ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.

ಗಾಯಗೊಂಡ ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿತ್ತು. ಮೂವರು ಸಿಬ್ಬಂದಿಯನ್ನು ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹೆಡ್ ಕಾನ್​ಸ್ಟೇಬಲ್ ವಿಕಾಸ್ ಚೌಹಾಣ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಿಆರ್​ಪಿಎಫ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details