ಕರ್ನಾಟಕ

karnataka

By

Published : Aug 14, 2021, 10:55 AM IST

ETV Bharat / bharat

ಗುಪ್ತಚರ ಮಾಹಿತಿ ಆಧರಿಸಿ ಭಾರತದೊಳಗೆ ನುಸುಳಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳ ಬಂಧನ

ನಕಲಿ ಆಧಾರ್​ ಕಾರ್ಡ್​ ಹೊಂದಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಅಗರ್ತಲಾದ ಮಹಾರಾಜ ಬೀರ್ ಬಿಕ್ರಂ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

Four BD Nationals arrested from MBB Airport Tripura
ಗುಪ್ತಚರ ಮಾಹಿತಿ ಆಧರಿಸಿ ಭಾರತಕ್ಕೆ ನುಸುಳಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳ ಬಂಧನ

ಅಗರ್ತಲಾ(ತ್ರಿಪುರಾ):ಸ್ವಾತಂತ್ರ್ಯ ದಿನಕ್ಕೆ ಭಾರತ ಸಜ್ಜುಗೊಂಡಿರುವ ಸಂದರ್ಭದಲ್ಲೇ, ಅನುಮಾನಾಸ್ಪದವಾಗಿ ಗಡಿ ಪ್ರವೇಶಿಸಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಗರ್ತಲಾದ ಮಹಾರಾಜ ಬೀರ್ ಬಿಕ್ರಂ ವಿಮಾನ ನಿಲ್ದಾಣದಲ್ಲಿ ಅವರನ್ನು ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಆಧರಿಸಿ ಬಂಧಿಸಲಾಗಿದೆ. ಅವರೆಲ್ಲರೂ ತ್ರಿಪುರಾದಿಂದ ಚೆನ್ನೈಗೆ ಪ್ರಯಾಣ ಮಾಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳನ್ನು ದುಲಾಲ್ ಶೇಖ್, ಯೂಸುಫ್ ಶೇಖ್, ಅಮೀನುಲ್ ಶೇಖ್ ಮತ್ತು ರೆಜಾಬುಲ್ ಶೇಖ್ ಎಂದು ಗುರುತಿಸಲಾಗಿದೆ. ಬಂಧನದ ನಂತರ ಅವರನ್ನು ಏರ್‌ಪೋರ್ಟ್​ನ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಅವರ ಬಳಿ ಆಧಾರ ಕಾರ್ಡ್​ಗಳು ಪತ್ತೆಯಾಗಿದ್ದು, ಅವುಗಳು ನಕಲಿ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ಸುಕಂತ ಸೇನಾ ಚೌಧರಿ 'ನಾಲ್ವರು ಬಾಂಗ್ಲಾ ಪ್ರಜೆಗಳು ಮಹಾರಾಜ ಬೀರ್ ಬಿಕ್ರಂ ವಿಮಾನನಿಲ್ದಾಣದಿಂದ ಚೆನ್ನೈಗೆ ತೆರಳುತ್ತಿದ್ದು, ಭದ್ರತಾ ತಪಾಸಣೆಯ ವೇಳೆ ಅವರ ಬಳಿಯ ಆಧಾರ್​ ಕಾರ್ಡ್​​ಗಳು ನಕಲಿ ಎಂದು ತಿಳಿದುಬಂದಿವೆ ಎಂಬ ಉನ್ನತಾಧಿಕಾರಿಗಳ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ:24 ಗಂಟೆಗಳಲ್ಲಿ ದೇಶದಲ್ಲಿ 38,667 ಸೋಂಕಿತರು ಪತ್ತೆ.. ದೆಹಲಿಯಲ್ಲಿ 'ಶೂನ್ಯ' ಸಾವು

ABOUT THE AUTHOR

...view details