ನಾಗ್ಪುರ (ಮಹಾರಾಷ್ಟ್ರ): ಸುಪ್ರೀಂಕೋರ್ಟ್ನಮಾಜಿ ಮುಖ್ಯ ನ್ಯಾಯಮೂರ್ತಿ ಶರದ್ ಬೊಬ್ಡೆ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಸರ ಸಂಘ ಚಾಲಕ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದಾರೆ.
ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಕುಟೀರಕ್ಕೆ ಭೇಟಿ ನೀಡಿದರು.
ನಾಗ್ಪುರ: ಆರ್‌ಎಸ್‌ಎಸ್ ನಾಯಕರ ಭೇಟಿಯಾದ ಮಾಜಿ CJI ಶರತ್ ಬೊಬ್ಡೆ - Mohan Bhagwat
ಈ ಹಿಂದೆ ಸುಪ್ರೀಂಕೋರ್ಟ್ ನಿವೃತ್ತ ಸಿಜೆಐ ರಂಜನ್ ಗೊಗೋಯ್ ಅವರನ್ನ ಕೇಂದ್ರ ಸರ್ಕಾರ ರಾಜ್ಯಸಭೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿತ್ತು. ಇದೀಗ ಇನ್ನೋರ್ವ ಮಾಜಿ ನ್ಯಾಯಾಮೂರ್ತಿ ಶರದ್ ಬೊಬ್ಡೆ ನಾಗ್ಪುರದಲ್ಲಿ ಆರ್‌ಎಸ್‌ಎಸ್ ನಾಯಕರ ಭೇಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಶರದ್ ಬೊಬ್ಡೆ, ಹೆಡ್ಗೆವಾರ್ ಕುಟೀರಕ್ಕೆ ಭೇಟಿ ನೀಡಿದ ನಂತರ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೂ ವಿಸಿಟ್ ಮಾಡಿದರು. ಅಲ್ಲಿ ಸರ ಸಂಘಚಾಲಕ ಮೋಹನ್ ಭಾಗವತ್ ಮತ್ತು ಅವರ ಸಹೋದ್ಯೋಗಿ ಭಯ್ಯಾಜಿ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.
ಸರ ಸಂಘಚಾಲಕ ಮೋಹನ್ ಭಾಗವತ್ ಮತ್ತು ಮಾಜಿ ಸಿಜೆಐ ಶರದ್ ಬೊಬ್ಡೆ ನಡುವೆ ಕೆಲ ವಿಚಾರಗಳ ಕುರಿತು ವಿಚಾರ ವಿನಿಮಯ ನಡೆದಿದೆ ಎನ್ನಲಾಗ್ತಿದೆ. ಆದರೆ, ಚರ್ಚೆಯ ವಿಷಯ ನಿಖರವಾಗಿ ಏನು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಮಾಜಿ ಮುಖ್ಯ ನ್ಯಾಯಮೂರ್ತಿ ಶರದ್ ಬೊಬ್ಡೆ ಅವರ ಭೇಟಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿತ್ತು. ಕೆಲವೇ ಸ್ವಯಂಸೇವಕರನ್ನು ಹೊರತುಪಡಿಸಿ ಯಾರಿಗೂ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.