ಕರ್ನಾಟಕ

karnataka

ETV Bharat / bharat

ನಿಂತ ಟ್ರಕ್​ಗೆ ಕಾರು ಡಿಕ್ಕಿ: ತಿರುಪತಿಗೆ ತೆರಳುತ್ತಿದ್ದ ಐವರ ಸಾವು! - Etv Bharat Karnataka news

ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತ ಟ್ರಕ್​ ಹಿಂಬದಿಗೆ ತಿರುಪತಿಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

Andhra pradesh road accident, Major accident in Prakasam, Andhra pradesh accident news, ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ನಿಂತ ಟ್ರಕ್​ಗೆ ಕಾರು ಡಿಕ್ಕಿ, ಆಂಧ್ರಪ್ರದೇಶ ಅಪಘಾತ ಸುದ್ದಿ, ಪ್ರಕಾಶಂ ಜಿಲ್ಲೆಯಲ್ಲಿ ರಸ್ತೆ ಅಪಘಾತ,
ತಿರುಪತಿಗೆ ತೆರಳುತ್ತಿದ್ದ ಐವರು ಸಾವು

By

Published : Aug 8, 2022, 7:55 AM IST

ಪ್ರಕಾಶಂ, ಆಂಧ್ರಪ್ರದೇಶ: ಜಿಲ್ಲೆಯ ಕಂಭಂ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತ ಟ್ರಕ್​ನ ಹಿಂಬದಿಗೆ ಕಾರೊಂದು ಬಲವಾಗಿ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಐವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮಾಚರ್ಲದಿಂದ ತಿರುಪತಿಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

Andhra Pradesh road accident: ಮೃತರನ್ನು ಪಲ್ನಾಡು ಜಿಲ್ಲೆಯ ವೆಲ್ದುರ್ತಿ ತಾಲೂಕಿನ ಸಿರಿಗಿರಿಪಾಡು ನಿವಾಸಿಗಳಾದ ಅನಿಮಿ ರೆಡ್ಡಿ (60), ಗುರವಮ್ಮ (60), ಅನಂತಮ್ಮ (55), ಆದಿಲಕ್ಷ್ಮಿ (58) ಮತ್ತು ನಾಗಿರೆಡ್ಡಿ (24) ಎಂದು ಗುರುತಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ನಿಂತ ಟ್ರಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜಾಗಿದೆ. ಈ ಅಪಘಾತ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ:ಖಾಸಗಿ ಬಸ್-ಟ್ರ್ಯಾಕ್ಟರ್ ನಡುವೆ ಅಪಘಾತ: ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ABOUT THE AUTHOR

...view details