ನವದೆಹಲಿ:ಭಾರತ-ಚೀನಾ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಗಳ ಸಿಬ್ಬಂದಿ ಹಾಗೂ ನಿವೃತ್ತ ಅಧಿಕಾರಿಗಳಿಗೆ ಮೊದಲ ಬಾರಿಗೆ ಇಂಟರ್ನೆಟ್ ಆಧಾರಿತ ಆನ್ಲೈನ್ ಮದ್ಯ ವಿತರಣಾ ಸೇವೆಯನ್ನು ಪ್ರಾರಂಭಿಸಲಾಗಿದೆ.
ಕೇಂದ್ರೀಕೃತ ಮದ್ಯ ನಿರ್ವಹಣಾ ವ್ಯವಸ್ಥೆ (ಸಿಎಲ್ಎಂಎಸ್) ಅನ್ನು ಆರಂಭ ಮಾಡಲಾಗಿದ್ದು, ಸಿಬ್ಬಂದಿಯು ಆನ್ಲೈನ್ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ. ಸಿಬ್ಬಂದಿಗೆ ಬೇಕಾದ ಬ್ರಾಂಡ್ಗಳು ತಾವಿರುವ ಸ್ಥಳದಲ್ಲಿ ದೊರೆಯದ ಕಾರಣದಿಂದ ಈ ಸೇವೆಯನ್ನು ಪ್ರಾರಂಭ ಮಾಡಲಾಗಿದೆ. ಇದಕ್ಕೂ ಮೊದಲು ಬೇರೆ ಪಡೆಗಳಿಗೆ ಅವಕಾಶ ನೀಡಲಾಗಿತ್ತು.
ಈ ಮೊದಲು ಸೇನಾ ಸಿಬ್ಬಂದಿ ಮತ್ತು ಅಧಿಕಾರಿಗಳು ನಿಗದಿಪಡಿಸಿದ ಸೇನಾ ಘಟಕಗಳಿಂದ ಮಾತ್ರವೇ ಮದ್ಯ ಖರೀದಿಸಲು ಅವಕಾಶವಿತ್ತು. ಈಗ ಮದ್ಯದ ಮಾರಾಟ ಘಟಕಗಳಿಂದ ದೂರ ಇರುವವರಿಗೂ ಕೂಡಾ ಮದ್ಯವನ್ನು ನೀಡುವ ಸಲುವಾಗಿ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.