ಕರ್ನಾಟಕ

karnataka

ETV Bharat / bharat

ಹೈದರಾಬಾದ್​ನಲ್ಲಿ ಚಿನ್ನದ ಎಟಿಎಂ: ನೀವು ಯಾವಾಗ ಬೇಕಾದ್ರೂ ಚಿನ್ನ ಡ್ರಾ ಮಾಡಬಹುದು! - ಚಿನ್ನದ ಎಟಿಎಂ

ಒಂದು ಕಾಲದಲ್ಲಿ ಎಟಿಎಂಗಳಿಂದ ಹಣ ತೆಗೆಯುವುದು ಬಹಳ ಆಶ್ಚರ್ಯಕರ ಸಂಗತಿಯಾಗಿತ್ತು. ದಿನೇ ದಿನೇ ಅದು ಎಲ್ಲರಿಗೂ ರೂಢಿಯಾಯಿತು. ತಂತ್ರಜ್ಞಾನಕ್ಕೆ ಅನುಗುಣವಾಗಿ ಹಲವು ಬದಲಾವಣೆಗಳಾಗುತ್ತಿವೆ. ಇದೀಗ ಚಿನ್ನದ ಎಟಿಎಂಗಳು ಕೂಡ ಬಂದಿವೆ.

Gold ATM in Hyderabad
ಹೈದರಾಬಾದ್​ನಲ್ಲಿ ಚಿನ್ನದ ಎಟಿಎಂ..

By

Published : Dec 4, 2022, 11:01 AM IST

ಹೈದರಾಬಾದ್‌:ದೇಶದ ಮೊದಲ ಚಿನ್ನದ ಎಟಿಎಂ ಅನ್ನು ಹೈದರಾಬಾದ್‌ನ ಬೇಗಂಪೇಟೆಯಲ್ಲಿ ಶನಿವಾರ ತೆರೆಯಲಾಗಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ನೀವು ಬಯಸಿದ ಚಿನ್ನವನ್ನು ಇದರಿಂದ ಡ್ರಾ ಮಾಡಬಹುದು.

ಅಶೋಕ್ ರಘುಪತಿ ಚೇಂಬರ್‌ನಲ್ಲಿರುವ ಗೋಲ್ಡ್ ಸಿಕ್ಕಾ ಎಂಬ ಕಂಪನಿಯಿಂದ ಸ್ಥಾಪಿಸಲಾದ ಈ ಎಟಿಎಂ ಅನ್ನು ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮರೆಡ್ಡಿ ಉದ್ಘಾಟಿಸಿದ್ದಾರೆ. ಚಿನ್ನದ ಎಟಿಎಂ ಉದಯೋನ್ಮುಖ ತಂತ್ರಜ್ಞಾನದ ಉದಾಹರಣೆ ಎಂದು ಅವರು ಬಣ್ಣಿಸಿದರು.

ಈ ಎಟಿಎಂ ಮೂಲಕ ಶೇ.99.99 ಶುದ್ಧತೆಯ 0.5, 1, 2, 5, 10, 20, 50 ಮತ್ತು 100 ಗ್ರಾಂ ಚಿನ್ನದ ನಾಣ್ಯಗಳನ್ನು ಡ್ರಾ ಮಾಡಬಹುದಾಗಿದೆ ಎಂದು ಗೋಲ್ಡ್ ಸಿಕ್ಕಾ ಸಿಇಒ ಸೈಯದ್ ತರುಜ್ ತಿಳಿಸಿದ್ದಾರೆ. ಚಿನ್ನದ ನಾಣ್ಯಗಳ ಜತೆಗೆ, ಅವುಗಳ ಗುಣಮಟ್ಟ ಮತ್ತು ಖಾತರಿಯನ್ನು ತಿಳಿಸುವ ದಾಖಲೆಗಳನ್ನು ಸಹ ನೀಡಲಾಗುತ್ತದೆ.

ನಗರದ ಗುಲ್ಜಾರ್‌ಹೌಸ್, ಸಿಕಂದರಾಬಾದ್, ಅಬಿಡ್ಸ್, ಪೆದ್ದಪಲ್ಲಿ, ವಾರಂಗಲ್ ಮತ್ತು ಕರೀಂನಗರದಲ್ಲಿ ಶೀಘ್ರದಲ್ಲೇ ಚಿನ್ನದ ಎಟಿಎಂಗಳನ್ನು ತೆರೆಯಲಾಗುವುದು. ಕಾಲಕಾಲಕ್ಕೆ ಎಟಿಎಂ ಪರದೆಯ ಮೇಲೆ ಚಿನ್ನದ ಬೆಲೆಗಳು ಕಾಣಿಸಿಕೊಳ್ಳುತ್ತವೆ. ಗೋಲ್ಡ್ ಸಿಕ್ಕಾ ದೇಶಾದ್ಯಂತ ಸುಮಾರು 3,000 ಎಟಿಎಂಗಳನ್ನು ಸ್ಥಾಪಿಸಲು ಯೋಜಿಸಿದೆ. ಇದರಲ್ಲಿ ಶೇ.60-70ರಷ್ಟು ಭಾಗ ಗ್ರಾಮೀಣ ಪ್ರದೇಶದಲ್ಲಿರಲಿದೆ. ಎಟಿಎಂಗಳು ಪ್ರಾಥಮಿಕವಾಗಿ ಹೈದರಾಬಾದ್​​ನಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ವಿಯೆಟ್ನಾಂನ ಚಿನ್ನದ ಮನೆ ಪ್ರವಾಸಿಗರ ಆಕರ್ಷಣೆ

ABOUT THE AUTHOR

...view details