ಜೆಮ್‌ಶೆಡ್‌ಪುರ (ಜಾರ್ಖಂಡ್):ಕೋರ್ಟ್ ಆವರಣದಲ್ಲಿ ಕೊಲೆ ಪ್ರಕರಣವೊಂದರ ಸಾಕ್ಷಿದಾರನ ಮೇಲೆ ಸೋಮವಾರ ಮಧ್ಯಾಹ್ನ ಅಪರಿಚಿತ ಬೈಕ್ ಸವಾರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಯುವಕ ಸ್ವಲ್ಪದರಲ್ಲೇ ಬದುಕುಳಿದಿದ್ದಾನೆ. ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ನವೀನ್ ಸಿಂಗ್ ಎಂಬ ಯುವಕನ ಮೇಲೆ ಗುಂಡು ಹಾರಿಸಲಾಗಿದೆ. ಮನ್‌ಪ್ರೀತ್ ಸಿಂಗ್ ಹತ್ಯೆ ಪ್ರಕರಣದ ಸಾಕ್ಷಿ ಆಗಿದ್ದ ಅವರು, ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಗುಂಡು ಹಾರಿಸಿ ಆರೋಪಿ ಪರಾರಿ: ಜೆಮ್‌ಶೆಡ್‌ಪುರ ನ್ಯಾಯಾಲಯದ 3ನೇ ಗೇಟ್ ಬಳಿ ಗುಂಡಿನ ದಾಳಿ ನಡೆದಿದೆ. ಗುಂಡು ಹಾರಿಸಿದ ಬಳಿಕ ದುಷ್ಕರ್ಮಿಗಳೆಲ್ಲರೂ ಓಡಿಹೋಗಿದ್ದಾರೆ. ಮತ್ತೊಂದೆಡೆ, ಘಟನೆಯ ಮಾಹಿತಿಯ ನಂತರ ಸ್ಥಳೀಯ ಪೊಲೀಸರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲು ಪೊಲೀಸರು ಸಮೀಪದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ:ರಾಜಸ್ಥಾನದಲ್ಲಿ ಹಿಂದು ರಣಭೇರಿ ಬೈಕ್ ರ್‍ಯಾಲಿಗೆ ಕಲ್ಲು: 11 ಮಂದಿ ಬಂಧನ
ಮನ್‌ಪ್ರೀತ್ ಹತ್ಯೆಯ ಸಾಕ್ಷಿಯ ಮೇಲೆ ಫೈರಿಂಗ್: ಕಳೆದ ವರ್ಷ ನಡೆದ ಮನ್‌ಪ್ರೀತ್ ಸಿಂಗ್ ಹತ್ಯೆ ಪ್ರಕರಣದ ನವೀನ್ ಕುಮಾರ್ ಸಿಂಗ್ ಸಾಕ್ಷಿಯಾಗಿದ್ದಾರೆ. ಸೋಮವಾರ ಅದೇ ಪ್ರಕರಣದಲ್ಲಿ ಸಾಕ್ಷಿ ಹೇಳಲು ನವೀನ್ ಕೋರ್ಟ್ಗೆ ಬಂದಿದ್ದರು. ಅದಾಗಲೇ ಹೊಂಚು ಹಾಕಿ ಬೈಕ್‌ನಲ್ಲಿ ಬಂದ ಕ್ರಿಮಿನಲ್‌ಗಳು ಸಾಕ್ಷಿದಾರನ ಮೇಲೆ ಗುಂಡು ಹಾರಿಸಿದ್ದಾರೆ. ಕೋರ್ಟ್ ಗೇಟ್ ಬಳಿ ನಡೆದ ಈ ಘಟನೆಯ ನಂತರ ಭದ್ರತೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಜೆಮ್‌ಶೆಡ್‌ಪುರ ನ್ಯಾಯಾಲಯಕ್ಕೆ ಬಂದು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಕೊಲೆ ಪ್ರಕರಣವೊಂದರ ಸಾಕ್ಷಿದಾರನ ಮೇಲೆ ಪಾತಕಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ಆದರೆ, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.