ಕರ್ನಾಟಕ

karnataka

By

Published : Jul 10, 2021, 8:41 PM IST

ETV Bharat / bharat

Watch Video: ಎರಡು ಪ್ರತ್ಯೇಕ ಘಟನೆಯಲ್ಲಿ ಹೊತ್ತಿ ಉರಿದ ಕಾರು; ಇಬ್ಬರು ದುರ್ಮರಣ

ಪ್ರತ್ಯೇಕ ಘಟನೆಗಳಲ್ಲಿ ಎರಡು ಕಾರು ಹೊತ್ತಿ ಉರಿದಿರುವ ಘಟನೆ ಹರಿಯಾಣದಲ್ಲಿ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

Moving Car Fire Karnal
Moving Car Fire Karnal

ಗುರುಗ್ರಾಮ್​(ಹರಿಯಾಣ): ಹರಿಯಾಣದ ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಘಟನೆಗಳಲ್ಲಿ ಎರಡು ಕಾರು ಹೊತ್ತಿ ಉರಿದಿದ್ದು, ಇಬ್ಬರು ಸಜೀವ ದಹನವಾಗಿದ್ದಾರೆ. ಹರಿಯಾಣದ ಗುರುಗ್ರಾಮ್​ ಹಾಗೂ ಕರ್ನಾಲ್​ ಎಂಬಲ್ಲಿ ಈ ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್​ ಆಗಿವೆ.

ಗುರುಗ್ರಾಮ್​ನ ಟಿಕ್ಲಿ ರಸ್ತೆ ಬಳಿ ನಿಯಂತ್ರಣ ಕಳೆದುಕೊಂಡ ಕಾರುವೊಂದು ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರಲ್ಲಿದ್ದ ಇಬ್ಬರು ಸಜೀವವಾಗಿ ದಹನಗೊಂಡಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ, ಬೆಂಕಿ ನಿಯಂತ್ರಣಕ್ಕೆ ತಂದಿದೆ. ಆದರೆ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಎರಡು ಪ್ರತ್ಯೇಕ ಘಟನೆಯಲ್ಲಿ ಹೊತ್ತಿ ಉರಿದ ಕಾರು

ಇದನ್ನೂ ಓದಿರಿ: ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ತೆಲುಗು ಖ್ಯಾತ ನಟ ನಿಧನ

ಕರ್ನಾಲ್​​ನಲ್ಲಿ ಹೋಂಡಾ ಸಿಟಿ ಕಾರಿಗೆ ಬೆಂಕಿ:ಕರ್ನಾಲ್​​ನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಚಲಿಸುತ್ತಿದ್ದ ಕಾರ್​ನಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದೆ. ಅದರಲ್ಲಿದ್ದ ಇಬ್ಬರು ತಕ್ಷಣವೇ ಹೊರಬಂದಿರುವ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಎರಡು ಘಟನೆಗಳ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details