ಬಹ್ರೇಚ್(ಉತ್ತರ ಪ್ರದೇಶ):ಅಪ್ರಾಪ್ತ ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಕೋರ್ಟ್ ಮಹತ್ವದ ತೀರ್ಪು ಹೊರಹಾಕಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ತಂದೆಗೆ ಮರಣದಂಡನೆ ವಿಧಿಸಿರುವ ಜೊತೆಗೆ, 51 ಸಾವಿರ ರೂ. ದಂಡ ವಿಧಿಸಿದೆ.
ಉತ್ತರ ಪ್ರದೇಶದ ಬಹ್ರೇಚ್ನ ಸುಜೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. 40 ವರ್ಷದ ತಂದೆ ನನ್ಹು ಖಾನ್ ಎಂಬಾತ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲ, ಆಕೆಯ ಬಾಲ್ಯವಿವಾಹವನ್ನೂ ಮಾಡಿದ್ದಾನೆ. ಆಕೆಯನ್ನು ಗಂಡನ ಮನೆಗೆ ಕಳುಹಿಸುವ ಬದಲು ಮನೆಯಲ್ಲೇ ಉಳಿಸಿಕೊಂಡು ದುಷ್ಕೃತ್ಯ ಮುಂದುವರೆಸಿದ್ದಾನೆ. ಇದರ ಬಗ್ಗೆ ತಾಯಿಗೆ ಗೊತ್ತಾಗುತ್ತಿದ್ದಂತೆ ಆಗಸ್ಟ್ 25ರಂದು ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾಳೆ.