ಪುರಿ: ಪ್ರಸಿದ್ಧ ಜಗನ್ನಾಥ ದೇವಸ್ಥಾನಕ್ಕೆ ಪ್ರವೇಶ ಪಡೆಯಲು ಕೆಲವು ಭಕ್ತರಿಗೆ ನಕಲಿ ಕೋವಿಡ್ ಆರ್‌ಟಿ-ಪಿಸಿಆರ್ ವರದಿಗಳನ್ನು ತಯಾರಿಸಿ ಮಾರಾಟ ಮಾಡಿದ ಆರೋಪದ ಮೇಲೆ 12 ಜನರ ತಂಡವನ್ನು ಪುರಿ ಪೊಲೀಸರು ಬಂಧಿಸಿದ್ದಾರೆ.
ಜಗನ್ನಾಥ ದೇವಸ್ಥಾನದ ಎಂಟ್ರಿಗೆ ನಕಲಿ RTPCR ವರದಿ ಮಾಡಿಕೊಡುತಿದ್ದ 12 ಜನರ ಬಂಧನ
ದೇವಾಲಯಕ್ಕೆ ಪ್ರವೇಶ ಪಡೆಯಲು ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿರುವುದರಿಂದ ಆರೋಪಿಗಳು ಇದನ್ನೇ ಬಂಡವಾಳ ಮಾಡಿಕೊಂಡು ನಕಲಿ ಪ್ರಮಾಣಪತ್ರಗಳನ್ನು ತಯಾರು ಮಾಡುತ್ತಿದ್ದರು.
ಜಗನ್ನಾಥ ದೇವಸ್ಥಾನದ ಎಂಟ್ರಿಗೆ ನಕಲಿ RTPCR ಮಾಡಿಕೊಡುತಿದ್ದ 12 ಜನರ ಬಂಧನ
ಪ್ರತಿ ನಕಲಿ ಆರ್‌ಟಿ-ಪಿಸಿಆರ್ ವರದಿಗೆ ಆರೋಪಿಗಳು 500 ರಿಂದ 700 ರೂ.ವರೆಗೆ ಹಣ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ದೇವಸ್ಥಾನಕ್ಕೆ ಭೇಟಿ ನೀಡುವ 96 ಗಂಟೆಗಳ ಮೊದಲು ಪಡೆದ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಅಥವಾ ಎರಡೂ ಡೋಸ್ ಪಡೆದವರಿಗೆ ಈ ದೇವಾಲಯಕ್ಕೆ ಹೋಗಲು ಅವಕಾಶ ನೀಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಿ ಭಕ್ತರಿಗೆ ನೀಡಿ ಇಲ್ಲಿಯವರೆಗೂ ಮೋಸ ಮಾಡುತ್ತಿದ್ದರು.