ನವದೆಹಲಿ :ಬಣ್ಣದ ಹಬ್ಬದ ಪ್ರಯುಕ್ತ ಫೇಸ್‌ಬುಕ್ ಹೋಳಿ ಥೀಮ್ ಇರುವ ಅವತಾರ್ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿ ಬಳಕೆದಾರರ ಗಮನ ಸೆಳೆದಿದೆ. ಈ ಹೊಸ ಅವತಾರ್ ಸ್ಟಿಕ್ಕರ್‌ಗಳನ್ನು ರಚಿಸಲು ಬಳಕೆದಾರರು ಫೇಸ್‌ಬುಕ್ ಅಥವಾ ಮೆಸೆಂಜರ್ ಕಾಮೆಂಟ್ ಕಾಂಪೋಸರ್ಗೆ ಹೋಗಿ ಮೊದಲು 'ಸ್ಮೈಲಿ' (smiley) ಬಟನ್ ಕ್ಲಿಕ್ ಮಾಡಬೇಕು.
ಸ್ಟಿಕ್ಕರ್ ಟ್ಯಾಬ್ ಓಪನ್ ಆದ ಬಳಿಕ 'ನಿಮ್ಮ ಅವತಾರ್ ರಚಿಸಿ' (Create Your Avatar) ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ಅಥವಾ ನಿಮ್ಮ ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಬುಕ್‌ಮಾರ್ಕ್‌ಗಳ ವಿಭಾಗದಲ್ಲಿ ಅವತಾರ್ ಕ್ರಿಯೇಟರ್ ಹುಡುಕಬಹುದು.
ಇದನ್ನೂ ಓದಿ: ಮಕ್ಕಳೂ ಇನ್ಮುಂದೆ ಇನ್‌ಸ್ಟಾಗ್ರಾಂ ಬಳಕೆ ಮಾಡಬಹುದು..
ನಂತರ ನೀವು ಫೇಸ್‌ಬುಕ್‌ನಲ್ಲಿ ಪೋಸ್ಟ್ಗಳನ್ನು ಮಾಡುವಾಗ ಅಥವಾ ಕಾಮೆಂಟ್ ಮಾಡುವಾಗ ಅಥವಾ ಮೆಸೆಂಜರ್ ಬಳಸುವಾಗ ಹೊಸ ಹೋಳಿ ಸ್ಟಿಕ್ಕರ್‌ಗಳು ಸ್ಟಿಕ್ಕರ್ ಲೈಬ್ರರಿಯಲ್ಲಿ ಕಾಣಿಸುತ್ತದೆ.
ಕಳೆದ ಎರಡು ವಾರಗಳಲ್ಲಿ ಭಾರತದಲ್ಲಿ 4 ದಶಲಕ್ಷಕ್ಕೂ ಹೆಚ್ಚು ಜನರು ಫೇಸ್‌ಬುಕ್‌ನಲ್ಲಿ ಹೋಳಿಯ ಬಗ್ಗೆ 6.6 ಮಿಲಿಯನ್‌ಗಿಂತಲೂ ಹೆಚ್ಚು ಪೋಸ್ಟ್ ಮತ್ತು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹೀಗಾಗಿ, ಬಳಕೆದಾರರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹೆಚ್ಚಿನ ಆಯ್ಕೆಗಳನ್ನು ನೀಡಲು ನಾವು 'ಹೋಳಿ ಅವತಾರ್' ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಫೇಸ್‌ಬುಕ್ ತಿಳಿಸಿದೆ.