ಕರ್ನಾಟಕ

karnataka

ETV Bharat / bharat

ಈ ವಾರದ ಮಧ್ಯ ಭಾಗವು ನಿಮ್ಮ ಪಾಲಿಗೆ ಶುಭಕರ, ಪ್ರಯತ್ನಗಳು ಫಲಪ್ರದ - horoscope of this week

ಈ ವಾರದ ರಾಶಿ ಭವಿಷ್ಯ ಇಲ್ಲಿದೆ..

etv bharat weekly horoscope
ವಾರದ ಭವಿಷ್ಯ

By

Published : May 22, 2022, 7:19 AM IST

ಮೇಷ:ಈ ವಾರದ ಮೊದಲ ಎರಡು ದಿನ ನೀವು ನಿಶ್ಯಕ್ತಿ ಹೊಂದಬಹುದು. ನಿರೀಕ್ಷಿತ ಫಲಿತಾಂಶ ಸಾಧಿಸಲು ಅಶಕ್ತರಾಗುವಿಕೆಯು ನಿಮ್ಮ ಹತಾಶೆ ಮತ್ತು ಉದ್ವೇಗವನ್ನು ಹೆಚ್ಚಿಸಬಹುದು. ಈ ಸಮಯದಲ್ಲಿ ಹೆಚ್ಚು ಶಾಂತವಾಗಿರಿ, ನಂತರ ನೀವು ಒಳ್ಳೆಯ ಸಮಯವನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಅವರ ಓದಿಗೆ ಸಂಬಂಧಿಸಿದಂತೆ ಅದ್ಭುತ ಸಮಯವನ್ನು ಹೊಂದುವಿರಿ. ನೀವು ನಿಮ್ಮ ಜೀವನ ಸಂಗಾತಿಯ ಸಾಂಗತ್ಯವನ್ನು ಆನಂದಿಸುವಿರಿ ಮತ್ತು ನಿಮ್ಮ ಪ್ರೀತಿಪಾತ್ರರನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣುವಿರಿ. ನೀವು ಷೇರು ಮಾರುಕಟ್ಟೆ ಅಥವಾ ಜೂಜಿನಲ್ಲಿ ತೊಡಗಿದ್ದಲ್ಲಿ, ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಈ ವಾರದ ಕೊನೆಯ ಎರಡು ದಿನಗಳಲ್ಲಿ, ನಿಮ್ಮ ಆದಾಯವು ಹೆಚ್ಚಲಿದೆ, ಪರಿಣಾಮವಾಗಿ ಇದರಿಂದ ಕೆಲಸದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಆರೋಗ್ಯವು ಸುಧಾರಣೆ ಕಾಣಬಹುದು, ಮತ್ತು ನೀವು ಆರೋಗ್ಯ ಮತ್ತು ಸದೃಢರಾಗಿರುವಿರಿ. ಹೊಸ ಬಟ್ಟೆಗಳು, ಆಭರಣಗಳು ಅಥವಾ ವಾಹನ ಖರೀದಿಸುವ ಸಾಧ್ಯತೆಯು ಅಧಿಕವಾಗಿದೆ. ನಿಮ್ಮ ಮನೆಯನ್ನು ಅಲಂಕರಿಸಲು ಮತ್ತು ಬಣ್ಣ ಬಳಿಯಲು ನೀವು ಹಣ ವೆಚ್ಚ ಮಾಡುವ ಸಾಧ್ಯತೆಯಿದೆ.

ವೃಷಭ: ಈ ವಾರ, ನಿಮ್ಮ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ನೀವು ಅತ್ಯಂತ ಉತ್ಸಾಹ ಮತ್ತು ಚೈತನ್ಯದಿಂದ ಕೂಡಿರುತ್ತೀರಿ. ನಿಮ್ಮ ಕೌಟುಂಬಿಕ ಜೀವನವು ಅದ್ಭುತವಾಗಿರುತ್ತದೆ. ನೀವು ಸಾಮಾಜಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು ಮತ್ತು ಸಾಮಾಜಿಕ ಸಭೆಗಳಲ್ಲೂ ಭಾಗಿಯಾಗಬಹುದು. ನಿಮ್ಮ ವೃತ್ತಿ ಜೀವನವು ಉತ್ತಮವಾಗಿರುತ್ತದೆ, ಜೊತೆಗೆ, ಈ ವಾರದ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ನೀವು ಕೆಲವು ಮುಖ್ಯ ಮಾತುಕತೆಗಳಲ್ಲಿ ತೊಡಗಿಕೊಳ್ಳುವಿರಿ. ವಾರದ ಮಧ್ಯಭಾಗದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ವಿದ್ಯಾರ್ಥಿಗಳು ಉತ್ತಮ ನಿರ್ವಹಣೆ ಮಾಡಲಿದ್ದಾರೆ. ಜೊತೆಗೆ ಅವರ ಗಮನವು ಪಠ್ಯೇತರ ಚಟುವಟಿಕೆಗಳತ್ತವು ಹೋಗಲಿದೆ. 17ನೇ ಮತ್ತು 19ನೇ ದಿನ ನೀವು ನಿಮ್ಮ ಓದಿನ ಕಡೆ ಹೆಚ್ಚು ಗಮನ ನೀಡಬೇಕು. ವಾರದ ಪ್ರಾರಂಭದಲ್ಲಿ ನೀವು ಸ್ವಲ್ಪ ಭಾವುಕರಾಗಬಹುದು, ಇದರ ಪರಿಣಾಮವಾಗಿ ನೀವು ನಿಮ್ಮ ಪ್ರೀತಿ ಜೀವನದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಈ ವಾರದ ಪ್ರಾರಂಭ ಮತ್ತು ಕೊನೆ ವಿವಾಹಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವವರಿಗೆ ಪೂರಕವಾಗಿದೆ. ವಾರದ ಮಧ್ಯಭಾಗದಲ್ಲಿ ನೀವು ಉದರ ಸಂಬಂಧಿ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಬೇಕು.

ಮಿಥುನ: ಈ ವಾರದ ಪ್ರಾರಂಭವು ಉತ್ಸಾಹದಿಂದ ಕೂಡಿರುತ್ತದೆ. ನೀವು ನಿಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವಿರಿ. ನೀವು ನಿಮ್ಮ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುವಿರಿ. ನಿಮ್ಮ ನಿರ್ವಹಣೆಯೇ ಮಾತನಾಡುತ್ತದೆ. ವಾರದ ಮದ್ಯಭಾಗವು ನಿಮ್ಮ ಸಂಬಂಧದಲ್ಲಿ ಮುಂದುವರಿಯಲು ಅಥವಾ ಹೊಸ ಸಂಬಂಧವನ್ನು ಪ್ರಾರಂಭಿಸಲು ನಿಮಗೆ ಅನುಕೂಲಕರವಾಗಿರಬಹುದು. ನೀವು ಪ್ರವಾಸಕ್ಕೆ ತೆರಳಬಹುದು. ನೀವು ಏನನ್ನಾದರೂ ಹೊಸದನ್ನು ಪ್ರಾರಂಭಿಸಬೇಕಾದಲ್ಲಿ, ನೀವು ಯಶಸ್ಸು ಪಡೆಯುವಿರಿ. ವಾರದ ಕೊನೆಯ ಹಂತದಲ್ಲಿ, ನಿಮಗೆ ಏಕಾಗ್ರತೆಯ ಕೊರತೆ ಕಾಣಬಹುದು. ಯಾವುದೇ ಕಾಗದ ಪತ್ರಗಳನ್ನು ಸಹಿ ಹಾಕುವಾಗ ನೀವು ಎಚ್ಚರದಿಂದ ಇರಬೇಕು. ಜೊತೆಗೆ, ನೀವು ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಜ್ವರ, ಅಜೀರ್ಣ ಸಮಸ್ಯೆ ಅಥವಾ ಉದರ-ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಅಧಿಕವಾಗಿದೆ.

ಕರ್ಕಾಟಕ: ನೀವು ಈ ವಾರವನ್ನು ಅತ್ಯಂತ ಉತ್ಸಾಹದಿಂದ ಪ್ರಾರಂಭಿಸುವಿರಿ, ಆದರೆ ಉದ್ವೇಗದೊಂದಿಗೆ ಕೊನೆಗೊಳಿಸುವಿರಿ. ವಾರದ ಪ್ರಾರಂಭದಲ್ಲಿ ನೀವು ತುಂಬಾ ಸಕಾರಾತ್ಮಕವಾಗಿ ಮುಂದಕ್ಕೆ ಸಾಗುವಿರಿ. ನೀವು ಹಣಕಾಸು ಮತ್ತು ವ್ಯವಹಾರ ಸಂಬಂಧಿತ ವಿಚಾರಗಳಿಗೆ ದೀರ್ಘಾವಧಿ ಯೋಜನೆಗಳನ್ನು ಮಾಡುವ ಸಾಧ್ಯತೆಯಿದೆ. ನೀವು ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸಿದ್ದಲ್ಲಿ, ಯಶಸ್ಸು ಸಾಧಿಸಬಹುದು. ವಿದ್ಯಾರ್ಥಿಗಳು ಅವರ ಓದಿನಲ್ಲಿ ಅದ್ಭುತ ಫಲಿತಾಂಶ ಪಡೆಯುತ್ತಾರೆ. ವಿದ್ಯಾರ್ಥಿಯಾಗಿ, ವಾರದ ಕೊನೆಯ ಮೂರು ದಿನಗಳಲ್ಲಿ ನೀವು ಹೆಚ್ಚು ಗಮನ ನೀಡಬೇಕಾಗುತ್ತದೆ. ಒತ್ತಡದ ವೃತ್ತಿ ದಿನಚರಿಯಿಂದಾಗಿ ವಿವಾಹಿತರಿಗೆ ಅವರ ಸಂಗಾತಿಗೆ ಮೌಲ್ಯಯುತ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಬಾಂಧವ್ಯ ಮತ್ತು ಅನ್ಯೋನ್ಯತೆಯು ಹೆಚ್ಚಾಗಬಹುದು. ಈ ವಾರಾಂತ್ಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರವಾಸ ತೆರಳಬಹುದು. ಇದು ನಿಮಗೆ ಮತ್ತು ನಿಮ್ಮ ಸಂಗಾತಿಗೆ ಖುಷಿಯನ್ನು ನೀಡುತ್ತದೆ. ಈ ವಾರದ ಕೊನೆಯ ಹಂತದಲ್ಲಿ ನಿಮ್ಮ ಆರೋಗ್ಯವು ನಿಮಗೆ ಸಹಕಾರ ನೀಡಬಹುದು.

ಸಿಂಹ: ವಾರದ ಮೊದಲ ಎರಡು ದಿನ ನಿಮಗೆ ಏಕಾಗ್ರತೆ ಹೊಂದಲು ಸಾಧ್ಯವಾಗುವುದಿಲ್ಲ, ಆದರೂ, ನಂತರ, ಆಮದು/ರಫ್ತು ಉದ್ಯಮ ಹೊಂದಿರುವ ಉದ್ಯಮಿಗಳು ಏಳಿಗೆ ಹೊಂದಬಹುದು. ವಾರದ ಮಧ್ಯಭಾಗವು ಏನಾದರೂ ಹೊಸದನ್ನು ಪ್ರಾರಂಭಿಸಲು ಪ್ರಯೋಜನಕಾರಿಯಾಗಲಿದೆ. ನೀವು ವ್ಯವಹಾರ ಸಂಬಂಧಿ ಪ್ರವಾಸಕ್ಕೆ ತೆರಳಬಹುದು. ಸರ್ಕಾರಿ ಸಂಬಂಧಿತ ಯೋಜನೆಗಳು ನಿಮ್ಮ ಪರವಾಗಿ ಬರಲಿದೆ. ನೀವು ನಿಮ್ಮ ಹಿರಿಯ ಉದ್ಯೋಗಿಗಳೊಂದಿಗೆ ಮುಖ್ಯ ವಿಷಯಗಳ ಬಗ್ಗೆ ಚರ್ಚಿಸಬಹುದು. ನೀವು ನಿಮ್ಮ ಸ್ನೇಹಿತರೊಂದಿಗೆ ಸಾಮಾಜಿಕ ಕೂಟಗಳಲ್ಲಿ ಭಾಗವಹಿಸಬಹುದು. ನಿಮ್ಮ ಪ್ರೀತಿ ಜೀವನವು ನಿಧಾನವಾಗಿ ಮತ್ತು ಸ್ಥಿರವಾಗಿ ಮುಂದಕ್ಕೆ ಸಾಗುವ ಸಾಧ್ಯತೆಯಿದೆ. ನೀವು ನಿಮ್ಮ ಅಹಂ ದೂರವಿಡುವುದು ಸೂಕ್ತ. ವಿದ್ಯಾರ್ಥಿಗಳಿಗೆ, ವಾರದ ಪ್ರಾರಂಭ ನಿಧಾನವಾಗಿರುತ್ತದೆ, ಆದರೆ ನಂತರ ಸುಧಾರಿಸಲ್ಪಡುತ್ತದೆ. ಈ ವಾರದ ಮೊದಲ ಎರಡು ದಿನಗಳ ಹೊರತಾಗಿ ನಿಮ್ಮ ಆರೋಗ್ಯವು ಅನುಕೂಲಕರವಾಗಿರುತ್ತದೆ.

ಕನ್ಯಾ: ನಿಮ್ಮ ವೃತ್ತಿ ಜೀವನವನ್ನು ಪರಿಗಣಿಸಿ, ವಾರದ ಪ್ರಾರಂಭ ನಿಮಗೆ ಆಶ್ಚರ್ಯಕರವಾಗಿರಲಿದೆ. ನೀವು ಸಂವಹನ, ಟೆಲಿಕಾಂ, ಶಿಕ್ಷಣ ಅಥವಾ ಸಲಹಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಲ್ಲಿ ವಾರದ ಮಧ್ಯಭಾಗದಲ್ಲಿ ನೀವು ಉತ್ತಮ ನಿರ್ವಹಣೆ ಮಾಡುವಿರಿ. ಈ ವಾರದ ಮೊದಲಾರ್ಧವು ಏನಾದರೂ ಹೊಸದನ್ನು ಪ್ರಾರಂಭಿಸಲು ನಿಮಗೆ ಸಹಾಯ ಮಾಡಬಹುದು. ಉದ್ಯಮಿಗಳು ಹೊಸ ಗ್ರಾಹಕರನ್ನು ಪಡೆಯಬಹುದು. ಹಿರಿಯ ಉದ್ಯೋಗಿಗಳು, ಉದ್ಯೋಗಿಗಳ ಕಠಿಣ ಶ್ರಮವನ್ನು ಗುರುತಿಸುತ್ತಾರೆ. ವಾರದ ಮಧ್ಯಭಾಗದಲ್ಲಿ ನೀವು ನಿಮ್ಮ ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲು ಶಕ್ತರಾಗುವಿರಿ. ನಿಮ್ಮ ಪ್ರೀತಿ ಜೀವನವು ಉತ್ತಮವಾಗಿರುತ್ತದೆ, ಆದರೆ ನಿಮ್ಮ ಕೋಪ ಮತ್ತು ಅಹಂ ಸಮಸ್ಯೆಗಳನ್ನು ಉಂಟು ಮಾಡಬಹುದು. ಪ್ರಾರಂಭದಲ್ಲಿ, ನಿಮ್ಮ ಆರೋಗ್ಯವು ನಿಮಗೆ ಸಹಕಾರ ನೀಡುತ್ತದೆ, ಆದರೆ, ನಂತರ ನಿಮಗೆ ಶೀತ, ಕೆಮ್ಮು ಜ್ವರ ಉಂಟಾಗಬಹುದು. ವಾರದ ಕೊನೆಯ ದಿನ, ನೀವು ನಿಶ್ಯಕ್ತಿ ಹೊಂದುವ ಸಾಧ್ಯತೆಯಿದೆ.

ತುಲಾ: ನೀವು ನಿಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಸಕ್ರಿಯರಾಗಿರುವಿರಿ ಮತ್ತು ಉದ್ಯೋಗಿಗಳು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ನೀವು ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸಿದ್ದಲ್ಲಿ, ನೀವು ಯಶಸ್ಸು ಕಾಣುವಿರಿ. ನಿಮ್ಮ ಹಿರಿಯ ಅಧಿಕಾರಿಗಳು ನಿಮಗೆ ಸಹಕಾರ ನೀಡುತ್ತಾರೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸಂಬಳದಲ್ಲಿ ಹೆಚ್ಚಳ ಮತ್ತು ಬಡ್ತಿ ಸಿಗುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿ ಮೇಲಿನ ನಿಮ್ಮ ಆಕರ್ಷಣೆಯು ಹೆಚ್ಚಾಗಲಿದೆ, ಆದರೆ ನಿಮ್ಮ ಸಂಬಂಧಕ್ಕೆ ಬದ್ಧತೆಯ ಅಗತ್ಯವೂ ಇದೆ. ವಾರದ ಮಧ್ಯಭಾಗದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಮೌಲ್ಯಯುತ ಸಮಯ ಕಳೆಯಲು ಶಕ್ತರಾಗುವಿರಿ. ವಿದ್ಯಾರ್ಥಿಗಳಿಗೆ ಈ ವಾರದ ಮೊದಲ ಐದು ದಿನ ಅವರ ಓದಿಗೆ ಉತ್ತಮವಾಗಿರುತ್ತದೆ. ವಾರದ ಕೊನೆಯ ಹಂತದಲ್ಲಿ ಧಾರ್ಮಿಕ ಚಟುವಟಿಕೆಗಳ ಮೇಲಿನ ನಿಮ್ಮ ಆಸಕ್ತಿಯು ಹೆಚ್ಚಾಗಲಿದೆ. ನೀವು ಅಗತ್ಯವಿರುವವರಿಗೆ ಆರ್ಥಿಕ ಸಹಾಯ ಮಾಡುವಿರಿ. ಈ ವಾರದ ಕೊನೆಯ ಎರಡು ದಿನಗಳಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರದಿಂದ ಇರಬೇಕು.

ವೃಶ್ಚಿಕ: ಈ ವಾರ ಅವರ ವೃತ್ತಿಯಲ್ಲಿ ಪ್ರಾಮುಖ್ಯತೆ ಪಡೆಯುವುದನ್ನು ಕಾಣುವಿರಿ ಮತ್ತು ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ನೀವು ನಿಮ್ಮ ಕೆಲಸದ ಬಗ್ಗೆ ತೃಪ್ತಿ ಹೊಂದುವಿರಿ. ನೀವು ಮುದ್ರಣ, ಆಟೋಮೊಬೈಲ್ ಅಥವಾ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಲ್ಲಿ, ಯಶಸ್ಸು ನಿಮ್ಮ ಮನೆಬಾಗಿಲಿಗೆ ಬರಲಿದೆ. ನೀವು ಹಣಕಾಸು ಪ್ರಯೋಜನವನ್ನೂ ಪಡೆಯುವಿರಿ. ಮೊದಲ ಎರಡು ದಿನಗಳಲ್ಲಿ ನೀವು ಪ್ರಣಯ ಭಾವನೆಯನ್ನು ಹೊಂದುವಿರಿ ಹಾಗೆಯೇ ಈ ವಾರದ ಕೊನೆಯ ಎರಡು ದಿನಗಳಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಒಳ್ಳೆಯ ಸಮಯ ಕಳೆಯುವಿರಿ. ನಿಮ್ಮ ಮಕ್ಕಳು ನಿಮಗೆ ಒಳ್ಳೆಯ ಸಮಾಚಾರಗಳನ್ನು ತಿಳಿಸಬಹುದು. ತ್ವರಿತವಾಗಿ ಹಣಗಳಿಸಲು ನೀವು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಉತ್ತಮ. ನಿಮ್ಮ ಆರೋಗ್ಯವು ನಿಮಗೆ ಸಹಕರಿಸಬಹುದು, ಆದರೆ ವಾರದ ಮಧ್ಯಭಾಗದಲ್ಲಿ, ನೀವು ಆಲಸ್ಯ ಮತ್ತು ಆಯಾಸ ಹೊಂದುವಿರಿ. ಆದ್ದರಿಂದ, ಕಠಿಣ ಶ್ರಮದೊಂದಿಗೆ ನೀವು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು.

ಧನು: ಈ ವಾರದ ಪ್ರಾರಂಭವು ನಿಮಗೆ ಅತ್ಯಂತ ಆಹ್ಲಾದಕರವಾಗಿರುತ್ತದೆ ಮತ್ತು ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಮೌಲ್ಯಯುತ ಸಮಯವನ್ನು ಕಳೆಯುವಿರಿ. ನೀವು ನಿಮ್ಮ ಕುಟುಂಬವನ್ನು ಸಂತೋಷಪಡಿಸಲು ಕೆಲವು ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ನಿಮ್ಮ ವೃತ್ತಿ ಜೀವನವನ್ನು ಪರಿಗಣಿಸಿ, ಈ ವಾರವು ನಿಮಗೆ ಅನುಕೂಲಕರವಾಗಿರುತ್ತದೆ. ಉದ್ಯೋಗಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಆನಂದಿಸಲು ನೀವು ನಿಮ್ಮ ವೃತ್ತಿಜೀವನದಿಂದ ಸ್ವಲ್ಪ ಸಮಯ ಹೊರ ಬರಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಈ ವಾರ ಸಕಾರಾತ್ಮಕವಾಗಿರಲಿದೆ, ಆದರೆ ವಾರದಲ್ಲಿ ಯೋಜನೆ ರೂಪಿಸುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹತ್ತೊಂಬತ್ತರಿಂದ ಈ ವಾರದ ಕೊನೆಯವರೆಗೆ ಎಚ್ಚರದಿಂದಿರುವುದು ಸೂಕ್ತ.

ಮಕರ: ವಾರದ ಪ್ರಾರಂಭದಲ್ಲಿ ಹಣಕಾಸು ಸಂಬಂಧಿತ ವಿಚಾರಗಳಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ನಂತರ, ನಿಮ್ಮ ಗಮನ ಹೆಚ್ಚೆಚ್ಚು ಹಣ ಸಂಪಾದಿಸುವತ್ತ ಮತ್ತು ನಿಮ್ಮ ಆದಾಯ ಮೂಲಗಳನ್ನು ಹೆಚ್ಚಿಸುವತ್ತ ಸಾಗುತ್ತದೆ. ನೀವು ನಿಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ನಿಮ್ಮ ಹಣವನ್ನು ದೀರ್ಘಾವಧಿ ಯೋಜನೆಗಳನ್ನು ಹೂಡಿಕೆ ಮಾಡುವ ಸಾಧ್ಯತೆಯಿದೆ. ನೀವು ಈ ಸಮಯದಲ್ಲಿ ಏನಾದರು ಹೊಸದನ್ನು ಮತ್ತು ಕ್ರಿಯಾತ್ಮಕವಾದುದನ್ನು ಮಾಡಲು ಬಯಸುತ್ತೀರಿ. ವಿದ್ಯಾರ್ಥಿಗಳಿಗೆ ಮೊದಲ ದಿನದ ಹೊರತಾಗಿ ಈ ವಾರವು ಅನುಕೂಲಕರವಾಗಿರುತ್ತದೆ. ನಿಮ್ಮ ಆರೋಗ್ಯವು ನಿಮಗೆ ಸಹಕಾರ ನೀಡಲಿದೆ, ಆದರೂ ನೀವು ಆರೋಗ್ಯವನ್ನು ಕಡೆಗಣಿಸುವಂತಿಲ್ಲ.

ಕುಂಭ: ವೃತ್ತಿಗೆ ಸಂಬಂಧಿಸಿದಂತೆ, ನೀವು ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಸಂವಹನ ಕೌಶಲ್ಯವನ್ನು ಬಳಸಲು ಶಕ್ತರಾಗುವಿರಿ. ಈ ವಾರದ ಹದಿನೇಳನೇ ಮತ್ತು ಹತ್ತೊಂಬತ್ತನೇ ದಿನ ನೀವು ಹಣಕಾಸು ಪ್ರಯೋಜನ ಪಡೆಯಬಹುದು. ವಾರದ ದ್ವಿತೀಯಾರ್ಧದಲ್ಲಿ ಉದ್ಯೋಗಿಗಳಿಗೆ ಅವರ ಹಿರಿಯ ಉದ್ಯೋಗಿಗಳಿಂದ ಸಹಕಾರದ ಕೊರತೆ ಉಂಟಾಗಬಹುದು. ವ್ಯವಹಾರದಲ್ಲಿರುವವರು ಅವರ ಹೆಚ್ಚಿನ ಸಮಯಗಳನ್ನು ಕಾನೂನುಗಳಲ್ಲಿ, ತೆರಿಗೆಗಳಲ್ಲಿ ಮತ್ತು ಸರ್ಕಾರಿ ನಿಯಮಗಳನ್ನು ಪಾಲಿಸುವುದರಲ್ಲಿ ಕಳೆಯಬಹುದು. ವಿದ್ಯಾರ್ಥಿಗಳು ಅವರ ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಬಹುದು ಆದರೆ ನಿರೀಕ್ಷಿತ ಫಲಿತಾಂಶ ಪಡೆಯಲು ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬಹುದು. ನಿಮ್ಮ ಸಂಬಂಧದಲ್ಲಿ ಹೆಚ್ಚಿನ ಕಾಳಜಿಯೊಂದಿಗೆ ಮುಂದುವರಿಯುವುದು ಸೂಕ್ತ. ನಿಮ್ಮ ಆರೋಗ್ಯವು ನಿಮಗೆ ಸಹಕಾರ ನೀಡಲಿ ಆದರೆ ವಾರದ ದ್ವಿತೀಯಾರ್ಧದಲ್ಲಿ ಬೆನ್ನು ನೋವು ಅಥವಾ ರಕ್ತದೊತ್ತಡದಿಂದ ಬಳಲಬಹುದು.

ಮೀನ: ವಾರದ ಪ್ರಾರಂಭದಲ್ಲಿ, ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಣಯದ ಸಮಯವನ್ನು ಆನಂದಿಸಲು ಶಕ್ತರಾಗುವಿರಿ. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಲಿದೆ. ನಿಮ್ಮ ವ್ಯವಹಾರದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಗಳು ಅಧಿಕವಾಗಿವೆ. ನಿಮ್ಮ ಸಂವಹನ ಕೌಶಲ್ಯದೊಂದಿಗೆ, ನೀವು ನಿಮ್ಮ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಶಕ್ತರಾಗುವಿರಿ. ನೀವು ಆಮದು/ರಫ್ತು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಲ್ಲಿ, ಈ ವಾರವು ನಿಮಗೆ ಅದ್ಭುತವಾಗಿರಲಿದೆ. ನಿಮ್ಮ ವ್ಯವಹಾರವು ಏಳಿಗೆ ಕಾಣಲಿದೆ. ಚರ್ಮ ಅಥವಾ ಬೆನ್ನುನೋವಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಈ ವಾರ ಅನುಕೂಲಕರವಾಗಿರಲಿದೆ ಮತ್ತು ಈ ವಾರ ಅವರ ವೃತ್ತಿಗೆ ಸಂಬಂಧಿಸಿದಂತೆ ಪರಿಣಿತರ ಬಳಿ ಚರ್ಚೆ ಮಾಡಬಹುದು.

ABOUT THE AUTHOR

...view details