ಕರ್ನಾಟಕ

karnataka

ETV Bharat / bharat

ಎಲ್ಗರ್ ಪರಿಷತ್ ಪ್ರಕರಣ: 'ಭಾರತದ ವಿರುದ್ಧ ಯುದ್ಧ' ಮಾಡಲು ಬಯಸಿದ್ದರಂತೆ ಆರೋಪಿಗಳು

ಮಹಾರಾಷ್ಟ್ರ ರಾಜ್ಯ ಸರ್ಕಾರ ಹಾಗೂ ಭಾರತ ಸರ್ಕಾರವನ್ನು ಬೀಳಿಸಿ 'ಜನತಾ ಸರ್ಕಾರ' ರಚಿಸಲು ಸಂಚು ರೂಪಿಸಿದ್ದೆವು. ಇದಕ್ಕಾಗಿ ಭಾರತದ ವಿರುದ್ಧ ಯುದ್ಧ ಮಾಡಲು ಬಯಸಿದ್ದೆವು ಎಂಬ ಸತ್ಯವನ್ನು 2018ರ ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

NIA
ಎಲ್ಗರ್ ಪರಿಷತ್ ಪ್ರಕರಣ

By

Published : Aug 23, 2021, 1:25 PM IST

ಮುಂಬೈ:ಎಲ್ಗರ್ ಪರಿಷತ್ ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಆರೋಪಿಗಳು ಭಾರತದ ವಿರುದ್ಧ ಯುದ್ಧ ಮಾಡಲು ಬಯಸಿದ್ದರು ಎಂದು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ 15 ಆರೋಪಿಗಳ ವಿರುದ್ಧ 17 ಆರೋಪಗಳನ್ನು ಹೊರಿಸಿ ಕರಡು ಪ್ರತಿಯನ್ನು ಎನ್ಐಎ ಅಧಿಕಾರಿಗಳು ತಯಾರು ಮಾಡಿದ್ದು, ಇಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಎನ್ಐಎ ಅಧಿಕಾರಿಗಳ ಬಳಿ ತಾವು ಮಹಾರಾಷ್ಟ್ರ ರಾಜ್ಯ ಸರ್ಕಾರ ಹಾಗೂ ಭಾರತ ಸರ್ಕಾರವನ್ನು ಬೀಳಿಸಿ 'ಜನತಾ ಸರ್ಕಾರ' ರಚಿಸಲು ಸಂಚು ರೂಪಿಸಿದ್ದೆವು. ಇದಕ್ಕಾಗಿ ಭಾರತದ ವಿರುದ್ಧ ಯುದ್ಧ ಮಾಡಲು ಬಯಸಿದ್ದೆವು ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.

ಏನಿದು ಎಲ್ಗರ್ ಪರಿಷತ್ ಪ್ರಕರಣ?

ಭೀಮಾ-ಕೋರೆಗಾಂವ್ ಯುದ್ಧದ 200ನೇ ವಾರ್ಷಿಕೋತ್ಸವದ ಹಿಂದಿನ ದಿನ 2017ರ ಡಿಸೆಂಬರ್ 31 ರಂದು ಮಹಾರಾಷ್ಟ್ರದ ಪುಣೆಯಲ್ಲಿ 'ಎಲ್ಗರ್ ಪರಿಷತ್' ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಸರಾಂತ ಎಡಪಂಥೀಯ ಕಾರ್ಯಕರ್ತರು ಮತ್ತು ಮಾವೋವಾದಿಗಳು ಭಾಗವಹಿಸಿದ್ದರು.

ಅಂದು ನಡೆದ ಭಾಷಣಗಳು ಮರುದಿನ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು ಎಂಬ ಆರೋಪದ ಮೇಲೆ 2018ರ ಜನವರಿಯಲ್ಲಿ ಸುಧಾ ಭಾರದ್ವಾಜ್, ವೆರ್ನಾನ್ ಗೊನ್ಸಾಲ್ವಿಸ್, ವರವರ ರಾವ್, ಹನಿ ಬಾಬು, ಆನಂದ್ ತೇಲ್ತುಂಬ್ಡೆ, ಶೋಮಾ ಸೇನ್, ಗೌತಮ್ ನವ್ಲಾಖಾ ಸೇರಿದಂತೆ 15 ಮಂದಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು. ಅಲ್ಲದೇ ಇವರು ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಪಿಐ (ಮಾವೋವಾದಿ) ನ ಸಕ್ರಿಯ ಸದಸ್ಯರು ಎಂದು ಎನ್ಐಎ ಆರೋಪಿಸಿದೆ.

ABOUT THE AUTHOR

...view details