ಮುಂಬೈ: ಶಿವಸೇನೆ ನಾಯಕ, ಸಂಸದ ಸಂಜಯ್ ರಾವತ್ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. 1,034 ಕೋಟಿ ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಂಜಯ್ ರಾವತ್ ಅವರ ಅಲಿಬಾಗ್ನಲ್ಲಿರುವ 8 ನಿವೇಶನಗಳು ಮತ್ತು ಮುಂಬೈನ ದಾದರ್‌ನಲ್ಲಿರುವ ಒಂದು ಫ್ಲಾಟ್ ಅನ್ನು ಜಪ್ತಿ ಮಾಡಿದೆ. ಅಲ್ಲದೇ ಸಂಜಯ್ ರಾವತ್ ಅವರ ಆಪ್ತ ಸ್ನೇಹಿತ ಪ್ರವೀಣ್ ರಾವತ್ ಅವರನ್ನು ಇಡಿ ಬಂಧಿಸಿದೆ.
ಕೇಂದ್ರ ಹಣಕಾಸು ತನಿಖಾ ಸಂಸ್ಥೆಯು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಮೀನು ಮತ್ತು ಫ್ಲಾಟ್‌ಗಳನ್ನು ಫ್ರೀಜ್ ಮಾಡಲು ಅನುಮತಿಯನ್ನು ನೀಡಿದೆ. ಕೇಂದ್ರ ಹಣಕಾಸು ತನಿಖಾ ಸಂಸ್ಥೆಯು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಮೀನು ಮತ್ತು ಫ್ಲಾಟ್‌ಗಳನ್ನು ಫ್ರೀಜ್ ಮಾಡಲು ಅನುಮತಿಯನ್ನು ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.