ಹೈದರಾಬಾದ್:ಟಾಲಿವುಡ್ಸಿನಿಮಾ ಚಿತ್ರರಂಗದ ಟಾಪ್ ನಟಿ ರಾಕುಲ್ ಪ್ರೀತ್ ಸಿಂಗ್,ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ರವಿ ತೇಜ್ ಸೇರಿದಂತೆ ಟಾಲಿವುಡ್ನ 12 ಸ್ಟಾರ್ ಸೆಲಿಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ತೆಲಂಗಾಣ ಅಬಕಾರಿ ಮತ್ತು ಮಾದಕವಸ್ತುಗಳ ತಡೆ ಇಲಾಖೆಯಿಂದ ದಾಖಲಾಗಿರುವ ಕಳೆದ ನಾಲ್ಕು ವರ್ಷಗಳ ಹಿಂದೆ ಡ್ರಗ್ಸ್ಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಅದರ ವಿಚಾರಣೆ ನಡೆಸುವ ಉದ್ದೇಶದಿಂದ ಈ ಸಮನ್ಸ್ ಜಾರಿಯಾಗಿದೆ. ಡ್ರಗ್ಸ್ ಕಳ್ಳಸಾಗಣೆ ಮತ್ತು ಅದರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 12 ಟಾಲಿವುಡ್ ಸೆಲೆಬ್ರಿಟಿಗಳಿಗೆ ಸಮನ್ಸ್ ಜಾರಿಗೊಳಿಸಿದೆ.
ಇದನ್ನೂ ಓದಿರಿ: ಈ ರೀತಿಯ ಫೋಟೋ ಹರಿಬಿಟ್ಟು, ಪಡ್ಡೆ ಹುಡುಗರ ನಿದ್ದೆ ಕದ್ದ ಶಮಾ!
ಯಾರಿಗೆಲ್ಲ ಸಮನ್ಸ್ ಜಾರಿ?
- ಟಾಪ್ ಡೈರೆಕ್ಟರ್ ಪುರಿ ಜಗನ್ನಾಥ್( ಆಗಸ್ಟ್ 31)
- ಚಾರ್ಮಿ ಕೌರ್ (ಸೆಪ್ಟೆಂಬರ್ 2)
- ರಾಕುಲ್ ಪ್ರೀತ್ ಸಿಂಗ್( ಸೆಪ್ಟೆಂಬ್ 6)
- ರಾಣಾ ದಗ್ಗುಬಾಟಿ( ಸೆಪ್ಟೆಂಬರ್ 8)
- ರವಿ ತೇಜ್( ಸೆಪ್ಟೆಂಬರ್ 9)
- ಶ್ರೀನಿವಾಸ್(ಸೆಪ್ಟೆಂಬರ್ 9)
- ನವದೀಪ್(ಸೆಪ್ಟೆಂಬರ್ 13)
- F ಕ್ಲಬ್ ಜನರಲ್ ಮ್ಯಾನೇಜರ್(ಸೆಪ್ಟೆಂಬರ್ 13)
- ಮುಮಿತ್ ಖಾನ್(ಸೆಪ್ಟೆಂಬರ್ 15)
- ತಾನಿಷ್(ಸೆಪ್ಟೆಂಬರ್ 17)
- ನಂದು(ಸೆಪ್ಟೆಂಬರ್ 20)
- ತರುಣ್(ಸೆಪ್ಟೆಂಬರ್ 22)
ವಿಚಾರಣೆ ನಡೆಸುವ ಉದ್ದೇಶದಿಂದ ಸಮನ್ಸ್ ಜಾರಿ ಮಾಡಲಾಗಿದ್ದು, ನಟಿ ರಾಕುಲ್ ಪ್ರೀತ್ ಸಿಂಗ್ ಸೆಪ್ಟೆಂಬರ್ 6ರಂದು, ರಾಣಾ ದಗ್ಗುಬಾಟಿ ಸೆಪ್ಟೆಂಬರ್ 8 ಹಾಗೂ ರವಿತೇಜ್ ಸೆಪ್ಟೆಂಬರ್ 9ರಂದು ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ಟಾಲಿವುಡ್ನ ಟಾಪ್ ಡೈರೆಕ್ಟರ್ ಪುರಿ ಜಗನ್ನಾಥ್ಗೆ ಆಗಸ್ಟ್ 31ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ 2017ರಲ್ಲಿ 62 ಸಂಶಯಾಸ್ಪದ ವ್ಯಕ್ತಿಗಳ ಕೂದಲು ಮಾದರಿ ಸಹ ಸಂಗ್ರಹ ಮಾಡಿತ್ತು.