ಕರ್ನಾಟಕ

karnataka

ETV Bharat / bharat

ಇಡಿ ಯಿಂದ ಸಮನ್ಸ್​.. ಮಹಾರಾಷ್ಟ್ರ ಮಾಜಿ ಸಚಿವ ಅನಿಲ್​ ದೇಶಮುಖ್​ಗೆ ಮತ್ತೆ ಸಂಕಷ್ಟ ​ - ಜಾರಿ ನಿರ್ದೇಶನಾಲಯ ಸಮನ್ಸ್​​

ಶುಕ್ರವಾರ ತಡರಾತ್ರಿ ಅನಿಲ್ ದೇಶಮುಖ್ ಅವರ ಆಪ್ತ ಸಹಾಯಕ ಮತ್ತು ಆಪ್ತ ಕಾರ್ಯದರ್ಶಿಯನ್ನು ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅನಿಲ್ ದೇಶಮುಖ್​ಗೆ ಸಮನ್ಸ್ ಜಾರಿ ಮಾಡಿದ್ದಾರೆ.

ED summons former Maharashtra home minister Anil Deshmukh
ಮಹಾರಾಷ್ಟ್ರ ಮಾಜಿ ಸಚಿವ ಅನಿಲ್​ ದೇಶಮುಖ್​ಗೆ ಜಾರಿ ನಿರ್ದೇಶನಾಲಯ ಸಮನ್ಸ್​​

By

Published : Jun 26, 2021, 10:59 AM IST

ಮುಂಬೈ(ಮಹಾರಾಷ್ಟ್ರ): ಶುಕ್ರವಾರವಷ್ಟೇ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅನಿಲ್ ದೇಶಮುಖ್​ಗೆ ಸಮನ್ಸ್ ಜಾರಿ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಂದು ವಿಚಾರಣೆಗೆ ಹಾಜರಾಗಬೇಕೆಂದು ಅನಿಲ್ ದೇಶಮುಖ್​​ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ISAC Award 2020: ಇಂದೋರ್ ಮತ್ತು ಸೂರತ್​ ನಗರಗಳಿಗೆ ಪ್ರಶಸ್ತಿ

ಶುಕ್ರವಾರ ಅನಿಲ್ ದೇಶಮುಖ್ ನಿವಾಸದ ಮೇಲೆ ದಾಳಿ ಮಾಡಿದ್ದು, ಅಷ್ಟೇ ಅಲ್ಲದೇ ತಡರಾತ್ರಿ ಅನಿಲ್ ದೇಶಮುಖ್ ಅವರ ಆಪ್ತ ಸಹಾಯಕ ಕುಂದನ್ ಶಿಂಧೆ ಮತ್ತು ಆಪ್ತ ಕಾರ್ಯದರ್ಶಿ ಸಂಜೀವ್ ಪಾಲಂಡೆ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.

ABOUT THE AUTHOR

...view details