ಮುಂಬೈ: ಮಹಾ ವಿಕಾಸ್ ಅಘಾಡಿ ಸರ್ಕಾರದ ಶಿವಸೇನಾ ನಾಯಕ ಹಾಗೂ ಸಚಿವ ಅನಿಲ್ ಪರಬ್ ಅವರಿಗೆ ಸೇರಿದ ಏಳು ಸ್ಥಳಗಳ ಮೇಲೆ ಇಂದು ಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈ, ಪುಣೆ, ರತ್ನಗಿರಿಯಲ್ಲಿ ಅನಿಲ್ ಅವರಿಗೆ ಸಂಬಂಧಿಸಿದ ಮನೆ ಮತ್ತು ರೆಸಾರ್ಟ್ ಮೇಲೆ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಶಿವಸೇನಾ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತರಲ್ಲೊಬ್ಬರಾದ ಅನಿಲ್ ಪರಬ್ ಮೇಲೆ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಕೇಂದ್ರಕ್ಕೆ ದೂರು ದಾಖಲಿಸಿದ್ದರು. 100 ಕೋಟಿ ರೂ. ಲಂಚ ಪ್ರಕರಣದಲ್ಲಿ ಸಚಿನ್ ವಾಜೆ ಮತ್ತು ಅನಿಲ್ ಪರಬ್ ಕೂಡ ಭಾಗಿಯಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು.