ಕರ್ನಾಟಕ

karnataka

ETV Bharat / bharat

4 ದಿನಗಳ ಕಾಲ ಮಾಲ್ಡೀವ್ಸ್, ಮಾರಿಷಸ್‌‌ ಪ್ರವಾಸ ಕೈಗೊಂಡ ವಿದೇಶಾಂಗ ಸಚಿವ ಎಸ್.ಜೈಶಂಕರ್ - 4 ದಿನಗಳ ಕಾಲ ಮಾಲ್ಡೀವ್ಸ್, ಮಾರಿಷಸ್‌‌ ಪ್ರವಾಸ ಕೈಗೊಂಡ ವಿದೇಶಾಂಗ ಸಚಿವ ಎಸ್.ಜೈಶಂಕರ್

ಇಂದಿನಿಂದ 4 ದಿನಗಳ ಕಾಲ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮಾಲ್ಡೀವ್ಸ್‌ ಮತ್ತು ಮಾರಿಷಸ್ ಪ್ರವಾಸ ಕೈಗೊಂಡಿದ್ದಾರೆ.

EAM Jaishankar
EAM Jaishankar

By

Published : Feb 20, 2021, 12:47 PM IST

ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು 4 ದಿನಗಳ ಕಾಲ ಮಾಲ್ಡೀವ್ಸ್ ಮತ್ತು ಮಾರಿಷಸ್‌‌ ಪ್ರವಾಸವನ್ನು ಕೈಗೊಂಡಿದ್ದು, ಇಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.

ಮಾಲ್ಡೀವ್ಸ್ ಭೇಟಿ ನೀಡಿದ ವೇಳೆ ಇಎಎಂ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರನ್ನು ಭೇಟಿ ಮಾಡಿ, ವಿದೇಶಾಂಗ ವ್ಯವಹಾರಗಳು, ರಕ್ಷಣಾ, ಹಣಕಾಸು, ಆರ್ಥಿಕ ಅಭಿವೃದ್ಧಿ ಯೋಜನೆಗಳು ಮತ್ತು ಮೂಲಸೌಕರ್ಯಗಳ ಕುರಿತು ಸಚಿವರೊಂದಿಗೆ ಸಾಕಷ್ಟು ಚರ್ಚೆ ನಡೆಸಲಿದ್ದಾರೆ.

ಕಡಲ ತೀರದ ಭದ್ರತೆ, ಸಹಕಾರ, ಸುರಕ್ಷತೆಗೆ ಸಂಬಂಧಿಸಿದಂತೆ ಮಾಲ್ಡೀವ್ಸ್, ಭಾರತ ಮತ್ತು ಶ್ರೀಲಂಕಾದ ನಡುವೆ 4 ನೇ ತ್ರಿಪಕ್ಷೀಯ ಸಭೆ ನಡೆದ ಎರಡು ತಿಂಗಳ ನಂತರ ಜೈಶಂಕರ್ ಅವರು ನೆರೆಯ ರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ, ಕೋವಿಡ್​​ ನೆರವು, ವಿವಿಧ ಮೂಲಸೌಕರ್ಯ ಯೋಜನೆಗಳ ಅನುಷ್ಠಾನ ಮತ್ತು ಮಾರಿಷಸ್‌ಗೆ ಭಾರತದ ನೆರವು ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ದ್ವಿಪಕ್ಷೀಯ ಒಪ್ಪಂದ ಚರ್ಚೆ ನಡೆಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಫೆಬ್ರವರಿ 22 ರಂದು ಜೈಶಂಕರ್ ಮಾರಿಷಸ್‌ಗೆ ಭೇಟಿ ನೀಡಲಿದ್ದಾರೆ.

ABOUT THE AUTHOR

...view details