ಬಾಲಸೋರ್ (ಒಡಿಶಾ):ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಒಡಿಶಾ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್)ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಿಸ್ತೃತ ಶ್ರೇಣಿಯ 'ಪಿನಾಕಾ' ರಾಕೆಟ್‌ನ ಯಶಸ್ವಿ ಪ್ರಯೋಗ ನಡೆಸಿದೆ.
ಒಟ್ಟಾರೆಯಾಗಿ 25 ಸುಧಾರಿತ ಪಿನಾಕಾ ರಾಕೆಟ್‌ಗಳನ್ನು ಗುರುವಾರ ಮತ್ತು ಶುಕ್ರವಾರದಂದು ಪರೀಕ್ಷಿಸಲಾಯಿತು. 122 ಎಂಎಂ ಕ್ಯಾಲಿಬರ್ ರಾಕೆಟ್‌ಗಳನ್ನು ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ (ಎಂಬಿಆರ್ಎಲ್) ಬಳಸಿ ರಾಕೆಟ್‌ಗಳನ್ನು ಉಡಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿನಾಕಾ ರಾಕೆಟ್ ಸಿಸ್ಟಂನ ಸುಧಾರಿತ ಶ್ರೇಣಿಯು ಸದ್ಯಕ್ಕೆ 45 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ನಾಶಪಡಿಸುತ್ತದೆ ಎಂದು ಮೂಲವೊಂದು ತಿಳಿಸಿದೆ. ಪಿನಾಕಾ ರಾಕೆಟ್‌ಗಳ ಗುರಿಗಳನ್ನು ಪರಿಶೀಲಿಸುವ ಸಲುವಾಗಿ ಹಲವು ಸಾಧನಗಳನ್ನು ಬಳಸಿಕೊಳ್ಳಲಾಗಿದೆ.